ಜಿನದತ್ತ ದೇಸಾಯಿ ಸಮಗ್ರ ಕಾವ್ಯ

Author : ಜಿನದತ್ತ ದೇಸಾಯಿ

Pages 700

₹ 550.00




Year of Publication: 2018
Published by: ಪ್ರಿಯದರ್ಶಿನಿ ಪ್ರಕಾಶನ
Address: # 138, 7ನೇ ಸಿ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-560104

Synopsys

ಹಿರಿಯ ಸಾಹಿತಿ ಜಿನದತ್ತ ದೇಸಾಯಿ ಅವರ ಸಮಗ್ರ ಕಾವ್ಯಗಳ ಕೃತಿ ಇದು. ನೀಲಾಂಜನ, ಮಧುಶಾಲಿನಿ, ಮತ್ತೆ ಬಂದಿದ್ದೇನೆ, ಮಾಗಿ, ಮಾಗಿಯ ಮೊದಲು, ಒಳಗಿನ ಮಳೆ, ಬೊಗಸೆಯಲ್ಲಿ ಬೆಳಕು, ಹೆಜ್ಜೆ ಸಾಲು, ಜಿನದತ್ತ ಚುಟುಕಗಳು, ಜಗದಗಲ ಮುಗಿಲಗಲ, ಕಡೆಗೋಲು, ಜಿನದತ್ತ ಆಯ್ದ ಕವಿತೆಗಳು, ಗಾಂಧಿನಗರ, ಸಹಸ್ರಚಂದ್ರ, ಅಮೋಘ ಹೀಗೆ 18ಕ್ಕೂ ಕವನ ಸಂಕಲನಗಳನ್ನು ಸಂಪಾದಿಸಿದ್ದು, ಅವರ ಕಾವ್ಯ ಸ್ವರೂಪಗಳ ಸಮಗ್ರತೆಯನ್ನು ಅಧ್ಯಯನ ಮಾಡಲು ಈ ಕೃತಿ ಸಹಕಾರಿಯಾಗಿದೆ. .

About the Author

ಜಿನದತ್ತ ದೇಸಾಯಿ
(03 April 1933)

ಜಿನದತ್ತ ದೇಸಾಯಿ ಅವರು ಮೂಲತಃ ಧಾರವಾಡ ಜಿಲ್ಲೆಯ (ಜನನ: 03-04-1933) ಅಮ್ಮಿನಭಾವಿಯವರು. ತಂದೆ ಗುಂಡಪ್ಪ ದೇಸಾಯಿ.ತಾಯಿ ಅಮ್ಮಕ್ಕ. ಜಮೀನುದಾರ ನೇಮಣ್ಣ ದೇಸಾಯಿ-ಜಾನಕಿಬಾಯಿ ದಂಪತಿ ಇವರನ್ನು ದತ್ತು ಪಡೆದರು. ಸ್ವಗ್ರಾಮದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ನವಲಗುಂದದಲ್ಲಿ  ಹೈಸ್ಕೂಲ್ ಹಾಗೂ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ ಎ ಹಾಗೂ  ಧಾರವಾಡದ ಜೆಎಸ್ಎಸ್ ಕಾಲೇಜ್ ನಲ್ಲಿ ಎಲ್ ಎಲ್ ಬಿ ಪೂರೈಸಿದರು. ಇವರು ಡಾ.ವಿ.ಕೃ.ಗೋಕಾಕರ ಶಿಷ್ಯರು. ವಿದ್ಯಾರ್ಥಿ ಜೀವನದಲ್ಲಿ  ಅವರು "ನೀಲಾಂಜನ" ಕವನ ಸಂಕಲನ ಪ್ರಕಟಿಸಿದ್ದರು.  ಬೆಳಗಾವಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ಸಹಾಯಕ ಸರ್ಕಾರಿ  (1962 ರಲ್ಲಿ)  ಜಿಲ್ಲಾ ಅಭಿಯೋಜಕರಾಗಿ, ಮುನ್ಸೀಫ್ ಮ್ಯಾಜಿಸ್ಟ್ರೇಟ್ಆ ನಂತರ 1966ರಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ, 1991ರಲ್ಲಿ ನಿವೃತ್ತರಾದರು. ಬೆಳಗಾವಿ  ಖಾಯಂ ಜನತಾ  ನ್ಯಾಯಾಲಯ ಅಧ್ಯಕ್ಷರು, ...

READ MORE

Related Books