‘ಹಿಂದಿ ವ್ಯಾಕರಣ ಕಲಿಕೆ’ ಹಿರಿಯ ಲೇಖಕ ಎಂ.ವಿ. ನಾಗರಾಜರಾವ್ ಅವರ ಕೃತಿ. ಕಲಿಕಾ ವಯಸ್ಸಿನ ಮಕ್ಕಳಿಗೆ ವ್ಯಾಕರಣ ಎಂಬುದು ಕಬ್ಬಿಣದ ಕಡಲೆ. ಅದು ಕಠಿಣ ಎಂಬ ಅಭಿಪ್ರಾಯ ಅವರಲ್ಲಿ ಮನೆ ಮಾಡಿರುತ್ತದೆ. ಆ ಅಭಿಪ್ರಾಯವನ್ನು ತೊಲಗಿಸಿ ಸರಳವಾಗಿ ವ್ಯಾಕರಣವನ್ನು ಅರ್ಥೈಸುವ ಸಲುವಾಗಿ ನಿವೃತ್ತ ಪ್ರಾಚಾರ್ಯರೂ ಹಿರಿಯ ಲೇಖಕರೂ ಆದ ನಾಗರಾಜರಾವ್ ಅವರು ಹಿಂದಿ ವ್ಯಾಕರಣವನ್ನು ಸುಲಭವಾದ ಕನ್ನಡದಲ್ಲಿ ವಿವರಿಸಿದ್ದಾರೆ. ಈ ಕೃತಿಯಲ್ಲಿ ಹಿಂದಿ ವರ್ಣಮಾಲೆಯಿಂದ ಹಿಡಿದು ವಚನ, ಸರ್ವನಾಮ, ವಾಚ್ಯ, ಸಮಾಸ, ಸಂಧಿ ಮೊದಲಾದ ವಿಷಯಗಳನ್ನು ಸರಳ ಕನ್ನಡದಲ್ಲಿ ವಿವರಿಸಿದ್ದು, ಇದು ಕಲಿಕಾ ವಿದ್ಯಾರ್ಥಿಗಳಿಗೆ ವ್ಯಾಕರಣ ಕೈಪಿಡಿಯಾಗುತ್ತದೆ.
©2024 Book Brahma Private Limited.