ಮಿಲನಿಯಮ್ ಸರಣಿಯು ಸಹಸ್ರಾರು ವರ್ಷಗಳ ಹಲವು ವಿದ್ಯಮಾನಗಳನ್ನು ಕುರಿತ ಪುಸ್ತಕ ಮಾಲೆ. ಮಿಲನಿಯಮ್ ಸರಣಿಯ ಒಂಬತ್ತನೆಯ ಪುಸ್ತಕ ದೇಶವಿದೇಶ-1. ಪ್ರಾಚೀನ ಕಾಲದ ನಾಗರಿಕತೆಗಳು ವಿಶ್ವದ ವಿವಿಧ ಪ್ರದೇಶಗಳಲ್ಲಿ ಅರಳಿದ ಬಗೆಯನ್ನು ಹಾಗೂ ವಿವರಣೆಗೆ ಸಿಗದ ಹಲವು ದೃಷ್ಟಾಂತಗಳನ್ನು ಈ ಕೃತಿ ಒಳಗೊಂಡಿದೆ. ಕಾಂಬೋಡಿಯಾದ ಅಂಗ್ ಕೋಲ್‌ವಾಟನ್ ಸ್ಮಾರಕಗಳು, ವಿಯತ್ಸಾಂ ರಾಷ್ಟದ ಸೈಗಾನ್ ನಗರದ ಮನೆಗಳು, ಕಾಂಪೂಚಿಯಾದ ಕೂಟಯುದ್ದಗಳು, ಪರಮಾಣು ಕಾಲಗಡಿಯಾರದ ಅಚ್ಚರಿಯ ಸಂಗತಿಗಳು, ಪೆರು ದೇಶದ ನಾಸಾದಲ್ಲಿ ಕಂಡುಬರುವ ಬೃಹತ್ ಕಲಾ ರಚನೆಗಳು ಹಾಗೆಯೇ ಮಹೆಂಜೋದಾರೋವಿನ ಪ್ರಾಚೀನ ವೈಭವ, ಓಕ್ ದ್ವೀಪದ ಪ್ರಾಚೀನ ಬಾವಿಗೆ ಸಂಬಂಧಿಸಿದ ಸಾಹಸಗಳು ಇಲ್ಲಿ ರೋಮಾಂಚಕ ಕತೆಗಳಾಗಿ ವರ್ಣಿತಗೊಂಡಿವೆ.
©2024 Book Brahma Private Limited.