‘ನಂಬಿಕೆ, ಮೂಢನಂಬಿಕೆ, ವೈಜ್ಞಾನಿಕ ಮನೋವೃತ್ತಿ’ ಕೃತಿಯು ಡಾ. ಅಬ್ದುಲ್ ರೆಹಮಾನ್ ಪಾಷಾ ಅವರು ಬರೆದಿದ್ದಾರೆ. ಓದುಗರಲ್ಲಿ ವೈಜ್ಞಾನಿಕ ಮನೋಭಾವ ರೂಢಿಸುವ ಪ್ರಯತ್ನ ಇದಾಗಿದೆ. ನಂಬಿಕೆಗೆ, ಮೂಢನಂಬಿಕೆ ಹಾಗೂ ವೈಜ್ಞಾನಿಕ ಮನೋಭಾವಕ್ಕೆ ಇರುವ ವ್ಯತ್ಯಾಸವನ್ನು ಇಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ನಂಬಿಕೆ ತೀರಾ ವ್ಯಕ್ತಿಗತವಾದ ಅಂಶ. ಅದನ್ನು ಸಾಮಾಜಿಕವಾಗಿ ಹೇರಲು ಯತ್ನಿಸಬಾರದು. ಯಾವುದೇ ಆಧಾರವಿಲ್ಲದ ಭಯಗ್ರಸ್ತ ನಂಬಿಕೆಯು ಮೂಢನಂಬಿಕೆಯಾಗುತ್ತದೆ. ವೈಜ್ಞಾನಿಕ ಮನೋಭಾವವು ಆಧಾರಸಹಿತವಾದ ದೃಢ ನಿಲುವು. ಇದನ್ನು ಸಾರ್ವತ್ರಿಕವಾಗಿಯೂ ಸಾಬೀತುಪಡಿಸಲು ಬರುತ್ತದೆ. ಇಂತಹ ಅಂಶಗಳ ವಿಶ್ಲೇಷಣೆ ಈ ಕೃತಿಯಲ್ಲಿದೆ.
ಈ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್‌ನ ‘ಕಾವ್ಯನಂದ’ ಪ್ರಶಸ್ತಿ (2015) ಲಭಿಸಿದೆ. ಶಿವಮೊಗ್ಗದ ಕರ್ನಾಟಕ ಸಂಘ, ಪಿ. ಲಂಕೇಶ್ ಹೆಸರಿನಲ್ಲಿ ನೀಡುವ “ಅತ್ಯುತ್ತಮ ಮುಸ್ಲಿಮ್ ಲೇಖ“ ಹಾಗೂ ನಾಡೋಜ ಡಾ. ಬರಗೂರು ಪ್ರತಿಷ್ಠಾನವು ವಿಚಾರ ಸಾಹಿತ್ಯಕ್ಕಾಗಿ ನೀಡುವ ರಾಜ್ಯ ಮಟ್ಟದ “ಬರಗೂರು ಪುಸ್ತಕ ಪ್ರಶಸ್ತಿ“ 2015 ಲಭಿಸಿದೆ.
©2024 Book Brahma Private Limited.