ಬೆಳೆಯುತ್ತಿರುವ ಹಿಮಾಲಯ

Author : ಟಿ. ಆರ್. ಅನಂತರಾಮು

Pages 80

₹ 22.00




Year of Publication: 1995
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 08022161913

Synopsys

ಭೂವಿಜ್ಞಾನಿ, ಲೇಖಕ ಟಿ.ಆರ್. ಅನಂತರಾಮು ಅವರ ಕೃತಿ ‘ಬೆಳೆಯುತ್ತಿರುವ ಹಿಮಾಲಯ’. ಹಿಮಾಲಯ ಪರ್ವತ ಶ್ರೇಣಿ ಎಂದೊಡನೆ ಮೈ ರೋಮಾಂಚನವಾಗುತ್ತದೆ. ಅದು ಜೀವನದಿಗಳ ಉಗಮಸ್ಥಾನ. ಸಿಂಧೂ-ಗಂಗಾನದಿ ಬಯಲಿನಲ್ಲಿ ನಾಗರಿಕತೆಯೇ ಕೊನರಿದೆ. ಅವುಗಳ ಮೆಕ್ಕಲು ಕೋಟಿ ಕೋಟಿ ಜನರಿಗೆ ಜೀವನಾಧಾರವಾದ ಕೃಷಿಯನ್ನು ಪೋಷಿಸಿದೆ. ಅದೊಂದು ನಮಗೆ ಭದ್ರಕೋಟೆ, ಶ್ರೀರಕ್ಷೆ. ಸಸ್ಯ ವಿಜ್ಞಾನಿಗಳಿಗೆ ಹಿಮಾಲಯವೇ ನಂದನವನ. ಎವರೆಸ್ಟ್ ಶಿಖರವೇರಿದ ತೇನ್‍ಸಿಂಗ್ ನಾರ್ವೆ ಮತ್ತು ಎಡ್ಮಂಡ್ ಹಿಲೆರಿ ಮಾನವ ಸಾಹಸದ ಪ್ರತೀಕವಾದರು. ಅದೇ ಹಿಮಲಯವನ್ನು ಭೂವಿಜ್ಞಾನಿಗಳು ಅಧ್ಯಯನ ಮಾಡಿ ಅದು ತುಂಬ ಕಿರಿಯ ಪ್ರಾಯದ ಪರ್ವತಮಾಲೆ ಎನ್ನುತ್ತಾರೆ.

ಆರೂವರೆ ಕೋಟಿ ವರ್ಷಗಳ ಹಿಂದೆ ಈಗ ಇರುವ ಹಿಮಾಲಯದ ಜಾಗ ಸಾಗರದ ಪಾಲಾಗಿತ್ತು. ನಿಧಾನವಾಗಿ ಸಾಗರ ಮೇಲೆದ್ದು ಐದು ಹಂತಗಳಲ್ಲಿ ಹಿಮಾಲಯ ಶ್ರೇಣಿ ಉತ್ಥಾನವಾಗಿ ಈಗಿನ ಸ್ಥಿತಿ ತಲಪಿತು. ಇದೊಂದು ಭೂಚರಿತ್ರೆಯಲ್ಲಿ ರೋಚಕ ಅಧ್ಯಾಯ. ಇಡೀ ಹಿಮಾಲಯವನ್ನು ಯಾವ ಭಾಗದಲ್ಲಿ ನೋಡಿದರೂ ಅಲ್ಲಿ ಸಾಗರ ತಳದಲ್ಲಿ ಸಂಚಯಿಸಿದ ಶಿಲೆಗಳೇ ಈಗಲೂ ಕಾಣುತ್ತವೆ. ಆದರೆ ಹಿಮಾಲಯವನ್ನು ಕೊಚ್ಚಿ ನದಿಗಳು ಕಲ್ಲುಮಣ್ಣನ್ನು ಸಾಗರಕ್ಕೊಯ್ಯುತ್ತಿವೆ. ಗಂಗಾ ನದಿಯೊಂದೇ ದಿನವೊಂದಕ್ಕೆ ಹಿಮಾಲಯದಿಂದ ಒಂಬತ್ತು ಲಕ್ಷ ಟನ್ ಹೂಳನ್ನು ಸಾಗರಕ್ಕೆ ಸೇರಿಸುತ್ತಿದೆ. ಆದರೂ ಹಿಮಾಲಯ ಸೆಟೆದು ನಿಂತಿದೆ, ಅಷ್ಟೇ ಅಲ್ಲ, ವರ್ಷಕ್ಕೆ ಆರು ಸೆಂಟಿ ಮೀಟರಿನಷ್ಟು ಬೆಳೆಯುತ್ತಿದೆ. ಇದರ ಹಿಂದಿರುವ ಕಾರಣಗಳನ್ನು ಈ ಪುಸ್ತಕದ ಪ್ರತಿ ಅಧ್ಯಾಯವೂ ವಿವರಿಸುತ್ತದೆ. ಓದುಗರನ್ನು ಭೂಚರಿತ್ರೆಯ ಹಳೆಯ ಅಧ್ಯಾಯಗಳಿಗೆ ಕರೆದೊಯ್ಯುತ್ತದೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books