ಪವಾಡ ಬಯಲು ಕಾರ್ಯಕ್ರಮ ಖ್ಯಾತಿಯ ಹುಲಿಕಲ್ ನಟರಾಜ್ ಅವರ ಕೃತಿ-‘ನೀವೂ ಮಾಡಿ ಪವಾಡ ಭಾಗ-1. ದೇವರು, ಮಾಟ-ಮಂತ್ರ ಇತ್ಯಾದಿ ಹೆಸರಿನಲ್ಲಿ ಜನ ಸಾಮಾನ್ಯರಿ ಭಾವನೆಗಳೊಂದಿಗೆ ಚೆಲ್ಲಾಟವಾಡಿ ವಂಚನೆ ಎಸಗುತ್ತಿರುವ ಹಾಗೂ ಶೋಷಣೆ ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಲೇಖಕರು ವ್ಯಕ್ತಿಗತ ಮಟ್ಟದಲ್ಲಿ ಚಳವಳಿಯನ್ನೇ ಆರಂಭಿಸಿದರ ಫಲವಾಗಿ ಮೂಡಿದ ಕೃತಿ ಇದು. ದುಷ್ಕರ್ಮಿಗಳು ಮಾಡುವ ಪವಾಡದ ಹಿಂದಿನ ವಂಚನೆಯನ್ನು ಬಯಲು ಮಾಡಿದ್ದು ಮಾತ್ರವಲ್ಲ; ಪ್ರತಿಯೊಬ್ಬರೂ ಸಹ ಇಂತಹ ಪವಾಡಗಳನ್ನು ಮಾಡಿ ತೋರಿಸಬಹುದು ಎನ್ನುವ ಮೂಲಕ ಢೋಂಗಿ ಪವಾಡ ಪುರುಷರ ವಂಚನೆಯ ಬಣ್ಣವನ್ನು ಬಯಲಿಗೆಳೆಯುವುದನ್ನು ಈ ಕೃತಿಯಲ್ಲಿ ಸರಳವಾಗಿ ನಿರೂಪಿಸಲಾಗಿದೆ.
©2025 Book Brahma Private Limited.