ಆಧುನಿಕ ಕನ್ನಡ ಸಾಹಿತ್ಯದ ಚರಿತ್ರೆಯನ್ನು ಇಡೀಯಾಗಿ ಅಂದರೆ ಒಟ್ಟು 17 ಸಂಪುಟಗಳಲ್ಲಿ ಕಟ್ಟಿಕೊಡುವ ಕನ್ನಡ ಸಾಹಿತ್ಯ ಪರಿಷತ್ತಿನ ಕಳಕಳಿಯ ಭಾಗವಾಗಿ 14ನೇ ಸಂಪುಟವಾಗಿ ಪ್ರಕಟಿತ ಗ್ರಂಥವಿದು-ವಿಜ್ಞಾನ-ತಂತ್ರಜ್ಞಾನ. ವಿವಿಧ ವಿಜ್ಞಾನ ಬರಹಗಾರರಿಂದ ಬರೆಯಿಸಲಾಗಿದೆ. ಲೇಖಕ ಟಿ.ಆರ್. ಅನಂತರಾಮು ಸಂಪಾದಕರು. ಪುಂಡಲೀಕ ಹಾಲಂಬಿ ಪ್ರಧಾನ ಸಂಪಾದಕರು. ಕನ್ನಡ ಸಾಹಿತ್ಯದಲ್ಲಿ ವಿಜ್ಞಾನ ಸಾಹಿತ್ಯವೂ ವಿಫುಲವಾಗಿದೆ. ನಿಘಂಟು, ವಿಜ್ಞಾನ ಪದಕೋಶಗಳು ಪ್ರಕಟವಾಗಿದ್ದು, ವಿಜ್ಞಾನದ ಅಂಕಣಗಳು, ಬರಹಗಳು, ಪರಿಸರ, ಕೃಷಿ, ಜೀವವಿಜ್ಞಾನ, ಜನಾಂದೋಲನ, ಕಲಾಮಾಧ್ಯಮದಲ್ಲಿ ವಿಜ್ಞಾನ, ವಿಜ್ಞಾನ ಪ್ರಸಾರಗಳು, ವಿಜ್ಞಾನ ಪತ್ರಿಕೆಗಳು ಇತ್ಯಾದಿ ಹೀಗೆ ವಿಷಯ ಸಂಗ್ರಹವಿದೆ. ಕನ್ನಡದ ಬ್ಲಾಗ್ ಗಳು, ವಿಕಿಪಿಡಿಯಾ, ಸಾಮಾಜಿಕ ಜಾಲತಾಣಗಳು, ಕಣಜ, ಜ್ಞಾನಕೋಶ, ಅಂತರ್ಜಾಲ ಪತ್ರಿಕೆಗಳು ಹೀಗೆ ಗುಣಮಟ್ಟದ ಬರಹಗಳು ಈ ಕೃತಿಯ ಔನ್ನತ್ಯವನ್ನು ಹೆಚ್ಚಿಸಿವೆ.
©2024 Book Brahma Private Limited.