‘ವಿಶಿಷ್ಟ ವಿಜ್ಞಾನಿಗಳ ವಿಭಿನ್ನ ಸಾಧನೆಗಳು’ ಎಲ್.ಪಿ.ಕುಲಕರ್ಣಿ ಅವರ ವಿಜ್ಞಾನ ಪಥದ ವಿಶಿಷ್ಟ ಸಾಧಕರ ಸಾಧನೆಗಳ ಕೃತಿಯಾಗಿದೆ. ಆತನ ಕೈಗುಣ ಚೆನ್ನಾಗಿದೆಯೆಂದು ಜನ ಅವನಲ್ಲಿಗೆ ಚಿಕಿತ್ಸೆಗಾಗಿ ಬರುತ್ತಿದ್ದರು. ಹೀಗೆ ಬಂದ ರೋಗಿಗಳಿಗೆ ಸಾಂತ್ವನ ಹೇಳುತ್ತಾ, ಅವರಿಗಿರುವ ಕಾಯಿಲೆಯನ್ನು ಪತ್ತೆಮಾಡಿ ಯೋಗ್ಯವಾದ ಔಷಧಿಗಳನ್ನು ಕೊಡುತ್ತಿದ್ದ. ಹೀಗಾಗಿ ಆತ ಜನಪ್ರೀಯ ವೈದ್ಯನಾಗಿದ್ದ. ಒಂದು ದಿನ ಈತನ ಕ್ಲಿನಿಕ್ ಗೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಸಂಪ್ರದಾಯಸ್ಥ ಕುಟುಂಬದ ಸ್ಥೂಲಕಾಯದ, ನಾಚಿಕೆ ಸ್ವಭಾವದ ಸುಂದರ ತರುಣಿಯೊಬ್ಬಳು ಬರುತ್ತಾಳೆ. ಆಗಿನ ಕಾಲದಲ್ಲಿ ತರುಣಿಯರನ್ನು ಪುರುಷ ವೈದ್ಯರು ದೇಹ ಮುಟ್ಟಿ ನೋಡಿ ಚಿಕಿತ್ಸೆ ಕೊಡುವ ಹಾಗಿದ್ದಿಲ್ಲ. ಹೀಗಾಗಿ ಈತನಿಗೆ ಇದೊಂದು ತಲೆನೋವಾಗಿ ಪರಿಣಮಿಸುತ್ತದೆ. ಆಗ ಶಬ್ದಶಾಸ್ತ್ರ ( ಅಕೋಸ್ಟೀಕ್ಸ್ ) ದ ಆಧಾರದ ಮೇಲೆ ಪೇಪರ್ ಕೊಳವೆಯೊಂದನ್ನು ಮಾಡಿ ಅದರ ಒಂದು ಬದಿಯನ್ನು ಆಕೆಯ ಎದೆಗೂ ಇನ್ನೊಂದು ಬದಿಯಲ್ಲಿ ತನ್ನ ಕಿವಿಯಿಂದ ಅವಳ ಹೃದಯ ಬಡಿತವನ್ನು ಆಲಿಸುತ್ತಾನೆ. ನಂತರ ದೇಹದಲ್ಲಿ ಆಗುತ್ತಿರುವ ತೊಂದರೆಯನ್ನು ಕೇಳಿ ತಿಳಿದುಕೊಂಡು ಔಷಧಿಗಳನ್ನು ಕೊಟ್ಟು ಕಳಿಸುತ್ತಾನೆ. ಇಂಥ ವಿಜ್ಞಾನ ಲೋಕದ ವೈಜ್ಞಾನಿಕ ವಿಷಯಗಳು ಈ ಪುಸ್ತಕದಲ್ಲಿವೆ.
©2025 Book Brahma Private Limited.