ವಿಜ್ಞಾನ ಲೇಖಕ ಜಿ.ಟಿ.ನಾರಾಯಣರಾವ್ ಅವರು ಬರೆದ ಕೃತಿ ‘ವೈಜ್ಞಾನಿಕ ಮನೋಧರ್ಮ. ವಿಜ್ಞಾನ-ತಂತ್ರಜ್ಞಾನ ಬೆಳೆಯುತ್ತಿದೆ. ಅದರ ಜೊತೆಗೆ, ವೈಜ್ಞಾನಿಕ ಮನೋಭಾವವೂ ಬೆಳೆಯಬೇಕು. ತಪ್ಪಿದರೆ, ವಿಜ್ಞಾನದ ಬೆಳವಣಿಗೆಗೆ ಅರ್ಥವೇ ಇಲ್ಲದಂತಾಗುತ್ತದೆ. ವೈಜ್ಞಾನಿಕ ಮನೋಧರ್ಮದ ಬೆಳವಣಿಗೆ ಎಂದರೆ ಅದು ಮನುಷ್ಯನಿಗೆ ಇರಬೇಕಾದ ಸಾಮಾಜಿಕ ಜವಾಬ್ದಾರಿಯೇ ಆಗಿದೆ. ವೈಜ್ಞಾನಿಕ ಮನೋಧರ್ಮ ಎಂದರೆ ಏನು? ಸಾಮಾನ್ಯ ಮನೋಧರ್ಮಕ್ಕಿಂತ ಇದು ಹೇಗೆ ಭಿನ್ನ. ಸಾಮಾಜಿಕ ಜವಾಬ್ದಾರಿಗಳು ಇತ್ಯಾದಿ ಕುರಿತ ಚಿಂತನೆಗಳು ಲೇಖನ ರೂಪದಲ್ಲಿವೆ. ಇಲ್ಲಿಯ ಚಿಂತನೆಗಳಿಗೆ ಗೌರವವಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪುರಸ್ಕಾರ (1990) ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ "ಡಾ.ಎಚ್.ಎನ್. ದತ್ತಿನಿಧಿ ಪ್ರಶಸ್ತಿ ಲಭಿಸಿದೆ.
©2025 Book Brahma Private Limited.