ವಿಜ್ಞಾನ ಸಾಹಿತ್ಯ ನಿರ್ಮಾಣ-ಕೃತಿಯು ಸಾಹಿತಿ ಹಾಗೂ ಅಂಕಣಕಾರ ಡಾ. ಹಾ.ಮಾ. ನಾಯಕ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ವಿಜ್ಞಾನ ವಿಷಯದಲ್ಲಿ ಕನ್ನಡ ಭಾಷೆಯ ಬಳಕೆ ಅಭಿವೃದ್ಧಿ ದೃಷ್ಟಿಯಿಂದ ಮೂರು ವಿಶ್ವವಿದ್ಯಾಲಯಗಳ ವಿಜ್ಞಾನದ 17 ಜನ ಪರಿಣಿತರು ಒಳಗೊಂಡು ಚರ್ಚಿಸಿದ ಶಿಬಿರದ ಫಲವಾಗಿ ಈ ಕೃತಿ ಹೊರಬಿದ್ದಿದೆ.
ವಿಜ್ಞಾನ ಪಠ್ಯಪುಸ್ತಕಗಳು, ಪಾರಿಭಾಷಿಕ ಶಬ್ದಗಳ ಸಮಸ್ಯೆ, ವಿಜ್ಞಾನ ಮಾಧ್ಯಮ ಸಮಸ್ಯೆ, ವಿಜ್ಞಾನ ಸಾಹಿತ್ಯದ ಸಮಸ್ಯೆಗಳು, ವಿಜ್ಞಾನದ ಭಾಷೆ ಇತ್ಯಾದಿ ವಿಷಯಗಳ ಕುರಿತು ಪರಿಣಿತರು ಉಪನ್ಯಾಸ ಮಂಡಿಸಿದ್ದರು. ಅಲ್ಲದೇ, ಮಾದರಿ ಅಧ್ಯಾಯಗಳು ಎಂದು ಪರಿಗಣಿತ ಉಪನ್ಯಾಸಗಳಾದ ಮಧ್ಯಮ ಜೀವಕಲ್ಪದ ಸರೀಸೃಪಗಳು, ಪ್ರಾಣಿ ಸಂತಾನ ರಕ್ಷಣೆ, ಪ್ರಾಣಿಗಳಲ್ಲಿ ಸಹಚರ್ಯೆ, ಸಸ್ಯಗಳಲ್ಲಿ ಸಂತಾನೋತ್ಪತ್ತಿ, ಸಸ್ತನಿಗಳ ದಂತ ವಿನ್ಯಾಸ ಇಂತಹ ಮಾದರಿ ಪತ್ರಿಕೆಗಳನ್ನೂ ಸಹ ಚರ್ಚಿಸಿದ್ದು, ಈ ಕೃತಿಯಲ್ಲಿ ಒಳಗೊಂಡಿದೆ.
©2024 Book Brahma Private Limited.