ಹಲವು ಪ್ರಶ್ನೆಗಳನ್ನು ನಾವು ಎತ್ತಬಹುದು. ದಿಢೀರೆಂದು ಮನುಕುಲ ಭೂಮಿಯಿಂದಲೇ ಕಣ್ಮರೆಯಾದರೆ ಪರಿಸ್ಥಿತಿ ಹೇಗಿರಬಹುದು? ಜೀವಿಸಂಕುಲವೇ ಸೊರಗಬಹುದೆ ಅಥವಾ ನಳನಳಿಸಬಹುದೆ? ಕುಡಿಯುವ ನೀರೇ ವಿಷವಾಗುತ್ತಿದೆ, ಪ್ರಕೃತಿ ಮುನಿದಿದೆ, ಭೂಮಿಯೇ ಪೂತನಿಯಾಗುತ್ತಿದ್ದಾಳೆ, ಹವಾಗುಣ ಕೆಡುತ್ತಿದೆ, ಧರೆ ಹೊತ್ತಿ ಉರಿಯುತ್ತಿದೆ, ಪ್ರಗತಿಯ ಹೆಸರಲ್ಲಿ ಭೂಸಂಪನ್ಮೂಲವನ್ನೆಲ್ಲ ಉಡಾಯಿಸಿ, ನಾವು ಮಾಡುತ್ತಿರುವ ಅಪಚಾರ ಒಂದೇ ಎರಡೆ? ಪ್ಲೂಟೋ ಗ್ರಹಕ್ಕೆ ಹಿಂಬಡ್ತಿ ನೀಡಿದ್ದೇಕೆ? ಚಂಡಮಾರುತಳಿಗೇಕೆ ನಾವು ಚಂದದ ಹೆಸರು ಕೊಡುತ್ತೇವೆ? ಸಾಗರವನ್ನು ಮಾಲಿನ್ಯಗೊಳಿಸಿ ಅದಕ್ಕೆ ಅಸಿಡಿಟಿ ತಂದಿದ್ದೇವೆಯೆ? ಸೂಪರ್ ಜ್ವಾಲಾಮುಖಿಗಳು ಕೆರಳಿದರೆ ನಾವು ಉಳಿಯುತ್ತೇವೆಯೆ? ಹಿಮದ ಮರುಭೂಮಿಯಾದ ಅಂಟಾರ್ಕ್‍ಟಿಕ ಖಂಡದಲ್ಲಿ ವಿಜ್ಞಾನಿಗಳು ಯಾವುದನ್ನು ಶೋಧಿಸುತ್ತಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೂ `ದಣಿ ಇಲ್ಲದ ಧರಣಿ’’ ಪುಸ್ತಕದಲ್ಲಿ ನಿಮಗೆ ಒಪ್ಪುವ ಉತ್ತರಗಳು ದೊರೆಯುತ್ತವೆ. ಕ್ಲಿಷ್ಟ ಎನ್ನುವ ವಿಜ್ಞಾನವನ್ನು ನವಿರಾದ ಭಾಷೆಯಲ್ಲಿ ಹೇಳುವಾಗ, ವಿಜ್ಞಾನದ ಹಿನ್ನೆಲೆ ಇಲ್ಲದವರೂ ಈ ಕ್ಷೇತ್ರದ ಬಗ್ಗೆ ಆಕರ್ಷಿತರಾಗುತ್ತಾರೆ. ಅದಕ್ಕೆ ತಕ್ಕ ನಿರೂಪಣೆಯನ್ನು ಈ ಕೃತಿ ಸಾಧಿಸಿದೆ.
©2025 Book Brahma Private Limited.