ವಿಜ್ಞಾನದ ಅಲೆದಾಟ

Author : ಲಿಂಗರಾಜ ರಾಮಾಪೂರ

Pages 114

₹ 80.00




Year of Publication: 2016
Published by: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು
Address: ವಿಜ್ಞಾನ ಭವನ, ಬನಶಂಕರಿ 2ನೇ ಹಂತ, ಬೆಂಗಳೂರು
Phone: 08026718939

Synopsys

ಇದೊಂದು ವಿಜ್ಞಾನದ ದಾಹವನ್ನು ನೀಗಿಸುವ ವಿಜ್ಞಾನದಲೆದಾಟ. ಹೋದಲ್ಲೆಲ್ಲಾ ವಿಜ್ಞಾನದ ಕೌತುಕಗಳನ್ನು, ವಿಸ್ಮಯಗಳನ್ನು ತಿಳಿದುಕೊಳ್ಳುವ ವಿಜ್ಞಾನದ ದಾಹ. ವಿಜ್ಞಾನದ ಸೂಕ್ಷ್ಮ ಒಳಗಣ್ಣಿನಿಂದ ಪ್ರಪಂಚವನ್ನು ನೋಡುವ ಪುಟ್ಟ ಪ್ರಯತ್ನದ ಭಾಗ. “ಕೋಶ ಓದು ಇಲ್ಲವೇ ದೇಶ ಸುತ್ತು” ಎನ್ನುವಂತೆ ನಾನು ಓದುವುದಕ್ಕಿಂತ ಜ್ಞಾನದ ಹುಡುಕಾಟದಲ್ಲಿ ಅಲೆದದ್ದೇ ಹೆಚ್ಚು. ಮನುಷ್ಯ ನಿಸರ್ಗದ ಕೂಸಾಗಿದ್ದು ಅಲೆಯುವ ಸಂದರ್ಭಗಳಲ್ಲಿ ನಿಸರ್ಗವನ್ನು ಅರಿಯುತ್ತ ವಿಶೇಷ ಜ್ಞಾನವನ್ನು ಪಡೆಯುವ ಪ್ರಯತ್ನ ಮಾಡಿದ್ದೇನೆ. ಕರ್ನಾಟಕದ ಕೆಲವು ಪ್ರದೇಶಗಳು, ಹೊರ ರಾಜ್ಯದ ಕೆಲ ಸ್ಥಳಗಳು ಅಲ್ಲದೇ ಹೊರ ದೇಶದ ಕೆಲ ಸ್ಥಳಗಳಲ್ಲಿ ವಿಜ್ಞಾನದ ವಿದ್ಯಮಾನಗಳು ಹಾಗೂ ವಿಜ್ಞಾನವನ್ನು ಜನರ ಬಳಿಗೆ ಕೊಂಡೊಯ್ಯುವ ಕೆಲ ಪ್ರಯತ್ನಗಳು ಹೇಗೆಲ್ಲಾ ನಡೆಯುತ್ತಿವೆ ಎಂಬುದನ್ನು ತೋರಿಸುವ ಪುಟ್ಟ ಪ್ರಯತ್ನವೇ ಈ ಪುಸ್ತಕ “ವಿಜ್ಞಾನ ಪರಿಷತ್ತಿನಿಂದ ಅಮೆರಿಕ ನಾಸಾದವರೆಗೆ” ವಿಜ್ಞಾನದಲೆದಾಟ ಎನ್ನುತ್ತಾರೆ ಲೇಖಕ ಲಿಂಗರಾಜ ರಾಮಾಪೂರ.

About the Author

ಲಿಂಗರಾಜ ರಾಮಾಪೂರ
(22 July 1978)

ಡಾ.ಲಿಂಗರಾಜ ರಾಮಾಪೂರ ವ್ರತ್ತಿಯಲ್ಲಿ ಶಿಕ್ಷಕರು. ಪ್ರವ್ರತ್ತಿಯಲ್ಲಿ ಬರಹಗಾರರು. ಪ್ರಸ್ತುತ ಹುಬ್ಬಳ್ಳಿ ತಾಲೂಕು ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯದ ಎಲ್ಲ ಪ್ರಕಾರಗಳ ಕ್ರಷಿ ಮಾಡಿದ್ದಾರೆ. 25ಕೂ ಹೆಚ್ಚು ಕೃತಿ ರಚಿಸಿದ್ದಾರೆ. 200ಕೂ ಹೆಚ್ಚು ಲೇಖನ ಪ್ರಕಟಿಸಿದ್ದಾರೆ. ಹುಗ್ಗಿ ಅಂದ್ರ ಹಿಂಗೈತಿ, ಪುಟ್ಟರಾಜ, ಭೂಮಿ ಮಾರಾಟಕ್ಕಿಲ್ಲ, ನಿಸಗ೯ ನ್ಯಾಯ, ನೀರ್ ಬಾರ್ ಮಕ್ಕಳ ನಾಟಕ ಕೃತಿಗಳು. ಪರಿಸರದೊಳಗಿನ ಸತ್ಯದ ಮಾತು, ವಿಜ್ಞಾನದ ಬೆಳಕಿನಲ್ಲಿ ಇವು ಬರಹಗಳನ್ನೊಳಗೊಂಡ ಕೃತಿಗಳು. ಗುಬ್ಬಿಗೊಂದು ಮನೆ ಮಾಡಿ ಮಕ್ಕಳ ಕಾದಂಬರಿ. ಶಿಕ್ಷಕನ ನೋಟದಲ್ಲಿ ಅಮೇರಿಕಾ, ವಿಜ್ಞಾನದ ...

READ MORE

Reviews

‘ವಿಜ್ಞಾನದ ಅಲೆದಾಟ’ ಈ ಕೃತಿ ನಿಜಕ್ಕೂ ಮನಸ್ಸನ್ನು ಜಗತ್ತಿನ ಮೂಲೆ ಮೂಲೆಗೆ ಕರೆದೊಯ್ದು ಪ್ರಾಕೃತಿಕವಾಗಿ, ವೈಜ್ಞಾನಿಕವಾಗಿ, ವೈವಿಧ್ಯಮಯವಾದ ತಾಣಗಳನ್ನು ಪರಿಚಯಿಸುತ್ತದೆ. ಕೃತಿಯನ್ನು ಓದಿ ಮುಗಿಸಿದಾಗ ಒಂದು ಸುತ್ತು 24 ಸ್ಥಳಗಳನ್ನು ಸುತ್ತಿ ಬಂದ ಅನುಭವವಾಗುತ್ತದೆ. ವೃತ್ತಿಯಲ್ಲಿ ಶಿಕ್ಷಕರಾದ ಲಿಂಗರಾಜ ರಾಮಾಪೂರವರ ಈ ಕಿರುಪುಸ್ತಕದಲ್ಲಿ ಅವರು ನೋಡಿ ಅನುಭವಿಸಿದ 24 ಸ್ಥಳಗಳ ವೈಜ್ಞಾನಿಕ ಪ್ರವಾಸ ಕಥನಗಳಿವೆ. ಬಹುತೇಕ ಶಿಕ್ಷಕರು ಮಕ್ಕಳಿಗೆ ಪಾಠ ಕಲಿಸುವಾಗ ಕೇವಲ ಕ್ಲಾಸಿನ ಕೊಠಡಿಗೆ ಸೀಮಿತರಾಗಿರುತ್ತಾರೆ. ಅವರಿಗೆ ಹೊಸ ಪ್ರಪಂಚದ ವಾಸ್ತವತೆಯ ಮಾಹಿತಿ ಇರುವುದಿಲ್ಲ. ಪ್ರಾಯೋಗಿಕವಾಗಿ ಮಕ್ಕಳ ಮನಸ್ಸನ್ನು ಹದಗೊಳಿಸದೇ ಬರಿ ಪುಸ್ತಕದ ಹುಳುಗಳನ್ನಾಗಿ ಮಾಡಿ ಅಂಕಗಳಿಸುವ ರೋಬೋಗಳನ್ನಾಗಿ ಮಾಡಿದರೆ ಸಾಲದು. ಈ ಸಂದರ್ಭದಲ್ಲಿ ಲಿಂಗರಾಜ ರಾಮಾಪೂರವರಂತಹ ಸೃಜನಶೀಲ ಶಿಕ್ಷಕರು ಶಿಕ್ಷಣ ಕ್ಷೇತ್ರಕ್ಕೆ ಮಾದರಿಯಾಗಿ ನಿಲ್ಲುತ್ತಾರೆ. ಮಕ್ಕಳ ಭವಿಷ್ಯ ತರಗತಿಗಳ ಕೊಠಡಿಯಲ್ಲಿ ಸೃಷ್ಟಿಯಾದರೂ ಹೊರಾಂಗಣ ಜಗತ್ತಿನ ಪ್ರಾಕೃತಿಕ ಸತ್ಯಗಳು, ಕೋಶ ಓದುವುದರ ಜೊತೆಗೆ ದೇಶ ಸುತ್ತುವುದರ ಮೂಲಕ ಗಟ್ಟಿಗೊಳ್ಳುತ್ತವೆ.
ಈಗಾಗಲೇ ಶ್ರೇಷ್ಠ ಶಿಕ್ಷಕ, ಪರಿಸರವಾದಿ, ಚಿಂತಕ, ನಾಟಕಕಾರ, ಲೇಖಕ ಎಂದು ಗುರುತಿಸಿಕೊಂಡು ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದಿರುವ ಲಿಂಗರಾಜರವರ ಈ ಕೃತಿ ವಿಶಿಷ್ಟ ಎನ್ನಿಸುತ್ತದೆ. ಸರಳ ಶೈಲಿ, ಓದಿಸಿಕೊಂಡು ಹೋಗುವ ಗುಣ ಹಾಗೂ ವೈಜ್ಞಾನಿಕ ಮಾಹಿತಿಗಳ ದಟ್ಟ ಅನುಭವಗಳ ಈ ಕೃತಿ ಅಪರೂಪದ ವೈಜ್ಞಾನಿಕ ಹಿನ್ನಲೆಯ ಪ್ರವಾಸ ಕಥನ. ಲೇಖಕರು ಸಮಯ ಸಿಕ್ಕಾಗ ಅನೇಕ ವಿಜ್ಞಾನ ಸಮಾವೇಶ, ವಿಜ್ಞಾನ ಗೋಷ್ಠಿ, ಪರಿಸರ ಅಧ್ಯಯನ ಶಿಬಿರ, ಶೈಕ್ಷಣಿಕ ತರಬೇತಿಗಳಲ್ಲಿ ಭಾಗವಹಿಸಿದ್ದಾರೆ. ಅನೇಕ ವಸ್ತು ಸಂಗ್ರಹಾಲಯ, ತಾರಾಲಯ, ವನ್ಯಜೀವಿ ಧಾಮ ಮತ್ತು ವಿಜ್ಞಾನ ಸಂಸ್ಥೆಗಳಿಗೆ ಭೇಟಿ ನೀಡಿ ಮರೆಯಲಾಗದ ಅನುಭವ ಪಡೆದಿದ್ದಾರೆ. ವಿಶೇಷವೆಂದರೆ ಲಿಂಗರಾಜರವರು ಸಂಗ್ರಹಿಸಿದ ಮಾಹಿತಿಗಳೆಲ್ಲವನ್ನೂ ಬರವಣಿಗೆಯ ರೂಪದಲ್ಲಿ ದಾಖಲಿಸಿರುವುದು ಶ್ಲಾಘನೀಯ ಸಂಗತಿ.

-ಎಸ್.ವಿ. ಸಂಕನೂರು, ಮಾಜಿ ಅಧ್ಯಕ್ಷರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬೆಂಗಳೂರು.. 
 

Related Books