ಜನಪ್ರಿಯ ವಿಜ್ಞಾನವೆಂದರೆ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು. ಇಂದಿನ ವೈಯಕ್ತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಜೀವನ ನಿರ್ವಹಣೆಗೆ ಅತ್ಯಗತ್ಯವಾಗಿ ತಿಳಿದಿರಲೇಬೇಕಾದ ಜ್ಞಾನವೇ ಜನಪ್ರಿಯ ವಿಜ್ಞಾನವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಿಂದ ನಮ್ಮ ಸಾಮಾಜಿಕ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರ್ಥೈಸಲು ಜನಪ್ರಿಯ ವಿಜ್ಞಾನದ ನೆರವು ಅಗತ್ಯ. ಈ ದಿಶೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ನಿರಂತರ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಕರಾವಿಪದ ಉದಯೋನ್ಮುಖ ಲೇಖಕರಿಗೆ ‘ಜನಪ್ರಿಯ ವಿಜ್ಞಾನಸಾಹಿತ್ಯ ರಚನಾ ಕಮ್ಮಟ’ ನನ್ನ ಬರಹಗಳಿಗೆ ನಿರ್ದಿಷ್ಟತೆಯನ್ನು ತಂದು ಕೊಟ್ಟಿದೆ. ಬಾಲವಿಜ್ಞಾನ ನನ್ನ ಬರಹಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದೆ. ಕಳೆದ ಕೆಲವು ವರ್ಷಗಳಿಂದ ಬಾಲವಿಜ್ಞಾನ, ಜೀವನ ಶಿಕ್ಷಣ, ಟೀಚರ್, ಗುಬ್ಬಚ್ಚಿ ಗೂಡು, ಶಿಕ್ಷಣ ಸಂಪದ, ಪ್ರಜಾವಾಣಿ, ವಿಜಯವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಿತ ಜನಪ್ರಿಯ ವಿಜ್ಞಾನ ಬರಹಗಳ ಗುಚ್ಛವೇ ‘ವಿಜ್ಞಾನದಲೆಯ ಬೆಳಕು’ ಎನ್ನುತ್ತಾರೆ ಲೇಖಕ ಲಿಂಗರಾಜ ರಾಮಾಪೂರ.
©2024 Book Brahma Private Limited.