ಅನ್ಯಲೋಕದಲ್ಲಿ ಜೀವಿಗಳಿದ್ದಾರೆಯೇ?-ಕೃತಿಯನ್ನು ಲೇಖಕ ಸೊಂದಲಗೆರೆ ಲಕ್ಷ್ಮಿಪತಿ ಅವರು ರಚಿಸಿದ್ದು, ಭೂಮಿ ಒಂದು ಗ್ರಹ. ಹೀಗೆ ಅಸಂಖ್ಯ ಗ್ರಹಗಳು ಗಗನ ಮಂಡಲದಲ್ಲಿ ಇವೆ ಎಂಬ ವಿಚಾರ ತೀರಾ ಪ್ರಾಚೀನವಾಗಿದ್ದು, ಅದಕ್ಕೆ ತಕ್ಕಂತೆ ಅಲ್ಲಿಯೂ ಜನರು ಇದ್ದು, ನಮ್ಮಂತೆ ದೈನಂದಿನ ವ್ಯವಹಾರ ಮಾಡುತ್ತಾರೆ. ನಮಗೆ ಭೂಮಿ ಬಿಟ್ಟು ಹೋಗಲಾಗದು. ಆದರೆ, ಬೇರೆ ಗ್ರಹದ ಜನತೆ ಭೂಮಿಗೆ ಬರಬಹುದು. ಅವರು ನಮಗೆ ಕಾಣಿಸುವುದಿಲ್ಲ. ಹೀಗೆ ಏನೆಲ್ಲ ನಂಬಿಕೆಗಳು, ವಿಚಾರಗಳು ಇಂದಿಗೂ ಇವೆ. ಇವುಗಳನ್ನು ಮೌಢ್ಯ ಎಂದು ಕರೆಯಬಹುದು. ಆದರೆ, ಬೇರೆ ಗ್ರಹಗಳ ಶೋಧ ನಡೆಯುತ್ತಿದ್ದಂತೆ ಅಲ್ಲಿ ಜನರಿರಬಹುದು ಎಂಬ ನಂಬಿಕೆಗೂ ಪುಷ್ಠಿ ಬರುತ್ತಿದೆ. ಇಂತಹ ಮಾಹಿತಿ ಒಳಗೊಂಡ ಕೃತಿ ಇದು.
©2025 Book Brahma Private Limited.