ವಿಜ್ಞಾನ ಪದವಿಪೂರ್ವ ಮತ್ತು ಪದವಿ ತರಗತಿಯ ವಿದ್ಯಾರ್ಥಿಗಳಿಗೆ ರಸಾಯನವಿಜ್ಞಾನದ ಮೂಲತತ್ವಗಳ ಸಮತೋಲನ ಮತ್ತು ವಿಮರ್ಶಾತ್ಮಕವಾದ ವಿವರಗಳನ್ನು ಒದಗಿಸುವ ಕೃತಿ ‘ರಸಾಯನ ವಿಜ್ಞಾನದ ಸಾಮಾನ್ಯ ತತ್ವಗಳು’.ಪ್ರೊ. ಆರ್. ವೇಣುಗೋಪಾಲ ಹಾಗೂ ಪ್ರೊ. ಬಿ.ಎಸ್. ಜೈಪ್ರಕಾಶ್ ಅವರು ಸಂಯುಕ್ತವಾಗಿ ರಚಿಸಿದ್ದು, ಕೃತಿಯಲ್ಲಿ 'ಏಕಮಾನಗಳು' ಮತ್ತು 'ರಾಸಾಯನಿಕ ವಿಶ್ಲೇಷಣೆ', ಇವೆರಡು ಅಧ್ಯಾಯಗಳಿವೆ. ಓದುಗರ ಕುತೂಹಲವನ್ನು ಹೆಚ್ಚಿಸಲು ರಾಸಾಯನಿಕ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಚಾರಿತ್ರಿಕ ಘಟನೆಗಳು ಮತ್ತು ವಿಜ್ಞಾನಿಗಳ ಛಾಯಾಚಿತ್ರಗಳನ್ನು ಕೊಡಲಾಗಿದೆ. ಪುಸ್ತಕದ ಕೊನೆಯಲ್ಲಿರುವ ಪಾರಿಭಾಷಿಕ ಶಬ್ದಕೋಶ ಒಂದು ಮತ್ತೊಂದುವಿಶೇಷತೆ.
©2025 Book Brahma Private Limited.