ಜಾಣ ಪ್ರಶ್ನೆ

Author : ಕೊಳ್ಳೆಗಾಲ ಶರ್ಮಾ

Pages 124

₹ 120.00




Year of Publication: 2023
Published by: ವಿಜ್ಞಾನ ಪ್ರಸಾರ್
Address: ನವದೆಹಲಿ- 110001

Synopsys

ಕೊಳ್ಳೆಗಾಲ ಶರ್ಮ ಅವರ ವಿಜ್ಞಾನಕ್ಕೆ ಸಂಬಂಧಪಟ್ಟ ಲೇಖನ ಕೃತಿ ʻಜಾಣ ಪ್ರಶ್ನೆ: ನಿತ್ಯ ಸಂದೇಹಗಳಿಗೊಂದು ಸಮಾಧಾನʼ. ವಿಜ್ಞಾನದಲ್ಲಿನ ಹಲವು ಕುತೂಹಲ ಅಂಶಗಳ ಕುರಿತು ಪುಸ್ತಕ ಅನಾವರಣಗೊಳಿಸುತ್ತಾ ಹೋಗುತ್ತದೆ. ಅಂತಹ ವಿಷಯಗಳನ್ನು ಮೊಗೆದಷ್ಟೂ ಮಜ. ಅವು ಸಂಶೋಧನೆಯ ಬೀಜ, ಒಂದು ಬೀಜ ನೆಟ್ಟರೆ ಸಾವಿರ ಬೀಜಗಳು ಮರುಸೃಷ್ಟಿ ಆಗುವಂತೆ ಹೊಸ-ಹೊಸ ದಾರಿಗಳು ಮೂಡುತ್ತಲೇ ಹೋಗುತ್ತವೆ. ಅದರಲ್ಲೂ ಮಕ್ಕಳಿಗೆ ವಿಜ್ಞಾನದ ವಿಚಾರಗಳಲ್ಲಿ ಕೊನೆಯಿಲ್ಲದ ಕುತೂಹಲ, ಪ್ರಶ್ನೆಗಳು. ಇಂತಹ ಪ್ರಶ್ನೆ, ಹಾಗೂ ಅವಕ್ಕೆ ಸಮಾಧಾನದ ಹೊತ್ತಿಗೆ ಇದು.

About the Author

ಕೊಳ್ಳೆಗಾಲ ಶರ್ಮಾ

ಕೊಳ್ಳೇಗಾಲ ಶರ್ಮ ಅವರು ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಪ್ರಚಾರ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಕನ್ಅಂನಡಪ್ಕರಭ ಪತ್ಣರಿಕೆಯಲ್ಲಿ ಅಂಕಣಕಾರರು. ಕನ್ನಡ ವಿಶ್ವವಿದ್ಯಾಲಯ (ಹಂಪಿ) ವಿಜ್ಞಾನ ಸಂಗಾತಿಯ ಗೌರವ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ‘ಸೈನ್ಸ್ ರಿಪೋರ್ಟರ್’ ಸಂಪಾದಕರೂ ಹೌದು. 'ಮರಳ ಮೇಲಿನ ಹೆಜ್ಜೆಗಳು', 'ಭೂಮಿಗುದುರಿತೆ ಜೀವ? ಮತ್ತು ಇತರ ಪ್ರಶ್ನೆಗಳು' ಕೃತಿಗಳನ್ನು ಬರೆದಿದ್ದಾರೆ. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ಶ್ರೇಷ್ಠ ಲೇಖಕ' ಗೌರವ ಲಭಿಸಿದೆ. ...

READ MORE

Related Books