ಲೇಖಕ ನಾಗೇಶ ಹೆಗಡೆ ಅವರ ಕೃತಿ- ಹಾರುವ ತಟ್ಟೆಯ ದಶಾವತಾರ. ವಿಜ್ಞಾನ ತಂತ್ರಜ್ಞಾನ, ಸಾಮಾಜಿಕ ವಿಚಾರ ಹಾಗೂ ವಿಕಾರಗಳು ಕುರಿತ ಕೃತಿ. ಸಿಯಾಚಿನ್ ಹಿಮಕುಸಿತದಲ್ಲಿ ಬದುಕಿ ಮೇಲೆದ್ದ ಹನಮಂತಪ್ಪ ಕೊಪ್ಪದ ಅವರನ್ನು ಕೊಂದಿದ್ದು ಯಾರು? ತಮಿಳುನಾಡಿನ ಸಾಗರತೀರಕ್ಕೆ ತಿಮಿಂಗಲುಗಳು ಬಂದು ಪ್ರಾಣಾರ್ಪಣೆ ಮಾಡಿದ್ದೇಕೆ? ಪವಿತ್ರ ಪಂಚಗವ್ಯದಲ್ಲೂ ಬ್ರಸೆಲ್ಲಾ ರೋಗಾಣುಗಳು ನುಸಳಬಹುದು ಹೇಗೆ? ಮಹಾದಾಯಿ ಸಮಸ್ಸೆ ನಿವಾರಣೆಗೆ ವಕೀಲರಿಗಿಂತ ವಿಜ್ಞಾನಿಗಳೇ ಶ್ರೇಷ್ಠ ಯಾಕಾಗುತ್ತಾರೆ? ಡ್ರೋನ್‌ಗಳು ನಾಳೆ ಎಂತೆಂಥ ಅವತಾರ ಎತ್ತಿ ಅಂತರಿಕ್ಷದಲ್ಲಿ ಸುತ್ತಲಿವೆ?- ಚಿಕ್ಕ ಸುದ್ದಿಯಾಗಿ ಮಿಂಚಿ ಮರೆಯಾಗುವ ಇಂಥ ವಾರ್ತೆಗಳನ್ನು ಕೆದಕಿ ತೆಗೆದ ಬ್ರಹ್ಮಾಂಡ ಸತ್ಯದ ಕಥನಗಳು ಈ ಕೃತಿಯಲ್ಲಿವೆ.
©2024 Book Brahma Private Limited.