`ದಿವ್ಯನೇತ್ರ’ ಹದಿಮೂರು ವಿಜ್ಞಾನ ಪ್ರಬಂಧಗಳ ಸಂಕಲನ. ಇವೆಲ್ಲವೂ ವರ್ತಮಾನಕ್ಕೆ ಸ್ಪಂದಿಸುತ್ತ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಾಗ ಚರ್ಚೆಗಿ ಒಳಗಾದ ವಿಷಯಗಳು. ಬದುಕಿನ ನಿಗೂಢವನ್ನು ಅನಾವರಣ ಮಾಡುತ್ತ ಹೊಸಲೋಕಕ್ಕೆ ಒಯ್ಯುತ್ತವೆ.
ಮಂಗಳಗ್ರಹದ ಸಾಹಸಗಾಥೆ, ಹಬಲ್ ಕಂಡ ವಿಶ್ವರೂಪ, ಬರ್ಮುಡಾ ಟ್ರೈಯಾಂಗಲ್‍ನ ರಹಸ್ಯ, ಸುನಾಮಿಯ ಹಾಲಹಲ, ನಮ್ಮನ್ನು ಬೆರಗುಗೊಳಿಸುವ ಗುಜರಾತಿನ ಜುರಾಸಿಕ್ ಪಾರ್ಕ್, ಕಾಲಾತೀತವಾಗಿ ನಮ್ಮನ್ನು ಮೋಹಕ್ಕೆ ಸಿಲುಕಿಸಿರುವ ಚಿನ್ನ, ಸೀಸ ನಮ್ಮನ್ನು ನಿಧಾನವಾಗಿ ಕೊಲ್ಲುತ್ತಿರುವ ಪರಿ, ಚಂದ್ರಶಿಲೆಯ ಚೂರನ್ನು ಕದ್ದ ಪ್ರಸಂಗ-ಇವೆಲ್ಲವನ್ನೂ ಈ ಕೃತಿ ಪಕಳೆಪಕಳೆಯಾಗಿ ತೆರೆದಿಡುತ್ತದೆ.
ಇಲ್ಲಿಯ ನಿರೂಪಣೆ ಮತ್ತು ಶೈಲಿ, ವಿಜ್ಞಾನ ಮತ್ತು ಸಾಹಿತ್ಯದ ತೆಳು ಗೆರೆಯನ್ನೇ ಅಳಿಸಿಹಾಕುತ್ತದೆ. ಸಮಕಾಲೀನ ವಿಜ್ಞಾನದ ಪ್ರಗತಿಗೆ ನಮ್ಮನ್ನು ಒಡ್ಡಿಕೊಳ್ಳದಿದ್ದರೆ ನಾವು ಶತಮಾನಗಳ ಹಿಂದಕ್ಕೆ ಸರಿಯಬೇಕಾಗುತ್ತದೆ. ಮನದಾಳಕ್ಕೆ ಇಳಿಯುವ ಈ ಸಂಗ್ರಹದ ಲೇಖನಗಳು ಓದುಗರನ್ನು ಚಿಂತನೆಗೆ ಹಚ್ಚುತ್ತವೆ.
©2025 Book Brahma Private Limited.