ಲೇಖಕ ಬಿ.ಜಿ.ಎಲ್. ಸ್ವಾಮಿ ಅವರು ಬರೆದ ಕೃತಿ-ಫಲಶ್ರುತಿ. ಹೂದೋಟ, ಫಲಾಹಾರ ಶಾಕಾಹಾರ, ಸಾಂಬಾರ, ಔಷಧೀಯ, ಧಾನ್ಯ, ಕಳೆ, ಐತರೇಯ ಎಂಬ ವಿಭಾಗಗಳಲ್ಲಿ ಸುಮಾರು 75 ಸಸ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ವಿವಿಧ ಸಂಸ್ಕೃತಿ ಹಾಗೂ ಜನಾಂಗಗಳಲ್ಲಿ ಈ ಸಸ್ಯಗಳು ಆಹಾರ, ಔಷಧಿ, ಅಲಂಕಾರ ಹಾಗೂ ಧಾರ್ಮಿಕ ಆಚರಣೆಗೆಗಳಿಗೆ ಬಳಸಲಾಗುತ್ತದೆ. "ಹೂದೋಟ" ಸುಗಂಧರಾಜ, ಸಂಜೆಮಲ್ಲಿಗೆ, ದವನ, ಚೆಂಡುಮಲ್ಲಿಗೆ, ಗೋರಂಟಿ, ಗುಲಾಬಿ, ಕಣಗಿಲೆ, ದೇವಕಣಗಿಲೆ, ಬೋಗನ್ ವಿಲ್ಲಿಯ, ಕ್ಯಾನ, ಗುಲ್‌ಮೊಹರ್, ಸೀಮೆ ಬಾಳೆ, ಡೇಲಿಯ, ರಂಗಮಾಲೆ, ನಾಗಲಿಂಗ ಮತ್ತು ಲಾಂಟಾನಾ.“ಫಲಾಹಾರ" ವಿಭಾಗದಲ್ಲಿ ದಾಳಿಂಬೆ, ಸೇಬು, ಚಕ್ಕೋತ, ಅಂಜೂರ, ಮಂಗೋಸ್ತೀನ್, ಮರಸೇಬು, ಕಲ್ಲಂಗಡಿ, ಖರ್ಜೂರ, ದ್ರಾಕ್ಷಿ ಮತ್ತು ಕಿರುನೆಲ್ಲಿ ಬಗ್ಗೆ ಮಾಹಿತಿ ಒದಗಿಸಿದ್ದಾರೆ. “ಶಾಖಾಹಾರ" ದಲ್ಲಿ ತೆಂಗು, ಬೆಂಡೆಕಾಯಿ, ಬಟಾಣಿ, ಈರುಳ್ಳಿ, ಬೆಳ್ಳುಳ್ಳಿ, ಸೀ ಕುಂಬಳ, ಬೂದುಕುಂಬಳ, ಕೆಂಪು ಮೂಲಂಗಿ, ಮೂಲಂಗಿ ಮತ್ತು ಗೋರಿಕಾಯಿ ಹಾಗೂ “ಐತರೇಯ" ದಲ್ಲಿ ಯೂಕಲಿಪ್ಟಸ್ ಸಸ್ಯ ಹೀಗೆ ಮಾಹಿತಿ ನೀಡಿದ್ದು,, ಓದು ಕುತೂಹಲ ಕೆರಳಿಸುತ್ತದೆ.
©2025 Book Brahma Private Limited.