ವಿಜ್ಞಾನ ಸಾಹಿತ್ಯ ನಿರ್ಮಾಣ

Author : ಹಾ.ಮಾ. ನಾಯಕ

Pages 272

₹ 12.00




Year of Publication: 1971
Published by: ಕನ್ನಡ ಅಧ್ಯಯನ ಸಂಸ್ಥೆ
Address: ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾಲಯ, ಮೈಸೂರು

Synopsys

ವಿಜ್ಞಾನ ಸಾಹಿತ್ಯ ನಿರ್ಮಾಣ-ಕೃತಿಯು ಸಾಹಿತಿ ಹಾಗೂ ಅಂಕಣಕಾರ ಡಾ. ಹಾ.ಮಾ. ನಾಯಕ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ವಿಜ್ಞಾನ ವಿಷಯದಲ್ಲಿ ಕನ್ನಡ ಭಾಷೆಯ ಬಳಕೆ ಅಭಿವೃದ್ಧಿ ದೃಷ್ಟಿಯಿಂದ ಮೂರು ವಿಶ್ವವಿದ್ಯಾಲಯಗಳ ವಿಜ್ಞಾನದ 17 ಜನ ಪರಿಣಿತರು ಒಳಗೊಂಡು ಚರ್ಚಿಸಿದ ಶಿಬಿರದ ಫಲವಾಗಿ ಈ ಕೃತಿ ಹೊರಬಿದ್ದಿದೆ.

ವಿಜ್ಞಾನ ಪಠ್ಯಪುಸ್ತಕಗಳು, ಪಾರಿಭಾಷಿಕ ಶಬ್ದಗಳ ಸಮಸ್ಯೆ, ವಿಜ್ಞಾನ ಮಾಧ್ಯಮ ಸಮಸ್ಯೆ, ವಿಜ್ಞಾನ ಸಾಹಿತ್ಯದ ಸಮಸ್ಯೆಗಳು, ವಿಜ್ಞಾನದ ಭಾಷೆ ಇತ್ಯಾದಿ ವಿಷಯಗಳ ಕುರಿತು ಪರಿಣಿತರು ಉಪನ್ಯಾಸ ಮಂಡಿಸಿದ್ದರು. ಅಲ್ಲದೇ, ಮಾದರಿ ಅಧ್ಯಾಯಗಳು ಎಂದು ಪರಿಗಣಿತ ಉಪನ್ಯಾಸಗಳಾದ ಮಧ್ಯಮ ಜೀವಕಲ್ಪದ ಸರೀಸೃಪಗಳು, ಪ್ರಾಣಿ ಸಂತಾನ ರಕ್ಷಣೆ, ಪ್ರಾಣಿಗಳಲ್ಲಿ ಸಹಚರ್ಯೆ, ಸಸ್ಯಗಳಲ್ಲಿ ಸಂತಾನೋತ್ಪತ್ತಿ, ಸಸ್ತನಿಗಳ ದಂತ ವಿನ್ಯಾಸ ಇಂತಹ ಮಾದರಿ ಪತ್ರಿಕೆಗಳನ್ನೂ ಸಹ ಚರ್ಚಿಸಿದ್ದು, ಈ ಕೃತಿಯಲ್ಲಿ ಒಳಗೊಂಡಿದೆ.

About the Author

ಹಾ.ಮಾ. ನಾಯಕ
(12 September 1931 - 10 November 2000)

ತಮ್ಮ ಅಂಕಣ ಬರಹಗಳಿಂದ ಪ್ರಸಿದ್ಧರಾಗಿದ್ದ ಹಾ.ಮಾ. ನಾಯಕರು (ಹಾರೋಗದ್ದೆ ಮಾನಪ್ಪನಾಯಕ) ಸಾಹಿತ್ಯ- ಸಾಂಸ್ಕೃತಿಕ ಲೋಕದ ದೊಡ್ಡ ಹೆಸರಾಗಿದ್ದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಾರೋಗದ್ದೆಯಲ್ಲಿ 1931ರ ಸೆಪ್ಟೆಂಬರ್ 12ರಂದು ಜನಿಸಿದರು. ತಂದೆ ಶ್ರೀನಿವಾಸನಾಯಕ, ತಾಯಿ ರುಕ್ಮಿಣಿಯಮ್ಮ. ಶಿವಮೊಗ್ಗೆಯಲ್ಲಿ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿಯೂ ಸ್ನಾತಕೋತ್ತರ ಶಿಕ್ಷಣವನ್ನು ಕಲ್ಕತ್ತೆಯಲ್ಲಿಯೂ ಮಾಡಿ ಭಾಷಾವಿಜ್ಞಾನದಲ್ಲಿ ಎಂ.ಎ. (1958)ಪದವಿಯನ್ನು ಪಡೆದರು. ತುಮಕೂರಿನಲ್ಲಿ ಕನ್ನಡ ಅಧ್ಯಾಪಕ (1955) ಆಗುವ ಮೂಲಕ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ್ದ ಅವರು ಅನಂತರ ಪ್ರವಾಚಕ, ಪ್ರಾಧ್ಯಾಪಕ, ನಿರ್ದೇಶಕರಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ್ದರು. ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಕುಲಪತಿ (1984) ...

READ MORE

Related Books