ಪ್ರೊ. ಟಿ.ಆರ್. ರಾಜಶೇಖರಯ್ಯ ಅವರು ಸಮಗ್ರ ಆಂಗ್ಲ ಕವಿತೆಗಳ ಸಂಗ್ರಹ ಕೃತಿ ಇದು. ಇಂಗ್ಲಿಷ್ ಭಾಷೆಯಲ್ಲಿ ಕವಿತೆ ಬರೆಯುವ ಭಾರತೀಯರಾದ ಎ.ಕೆ. ರಾಮಾನುಜನ್, ಜಯಂತ್ ಮಹಾಪಾತ್ರ, ಶಿವ ಕೆ. ಕುಮಾರ ಹಾಗೂ ಇತರರಂತೆ ಟಿ.ಆರ್. ರಾಜಶೇಖರಯ್ಯ ಅವರು ಕವಿತೆಗಳು ಲಯ, ಕಾವ್ಯ ಸೂಕ್ಷ್ಮತೆ ಹಾಗೂ ಉತ್ತಮ ಗುಣಮಟ್ಟದ್ದಾಗಿವೆ. ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ದ್ಯೋತಕವಾಗಿರುವ ಪುಣ್ಯಕೋಟಿ ಎಂಬ ಗೋವಿನ ಹಾಡು -ಕನ್ನಡದ ಈ ಸಾಹಿತ್ಯವನ್ನು ಟಿ.ಆರ್. ರಾಜಶೇಖರಯ್ಯ ಅವರು ಇಂಗ್ಲಿಷ್ ಗೆ ಅನುವಾದಿಸಿದ್ದು, ಈ ಸಂಕಲನ ಒಳಗೊಂಡಿದೆ. ಲೇಖಕ ಪ್ರೊ. ಬಸವರಾಜ ನಾಯ್ಕರ ಅವರು ಕವಿತೆಗಳನ್ನು ಸಂಪಾದಿಸಿದ್ದಾರೆ.
©2024 Book Brahma Private Limited.