ರವೀಂದ್ರ ಕಾವ್ಯ ಸಂಚಯ

Author : ಜಿ. ರಾಮನಾಥ್ ಭಟ್

Pages 2014

₹ 608.00

Buy Now


Year of Publication: 1148
Published by: ಗೀತಾ ಬುಕ್ ಹೌಸ್
Address: ಮೈಸೂರು-570001

Synopsys

ಗುರುದೇವ ರವೀಂದ್ರನಾಥ ಠಾಕೂರ ಅವರ ಕಾವ್ಯಗಳ ಕೃತಿ -ರವೀಂದ್ರ ಕಾವ್ಯ ಸಂಚಯ. ಈ ಎಲ್ಲ ಕಾವ್ಯಗಳನ್ನು ಅನುವಾದಿಸಿದವರು-ಜಿ. ರಾಮನಾಥ ಭಟ್. ನೊಬೆಲ್ ಪ್ರಶಸ್ತಿ ಪುರಸ್ಕೃತ ಕಾವ್ಯ ಕೃತಿ- ಗೀತಾಂಜಲಿ ಸೇರಿದಂತೆ 16ನೇ ವಯಸ್ಸಿನಲ್ಲಿ ಭಾನುಶಿಂಘೋ (ಸೂರ್ಯಸಿಂಹ) ಗುಪ್ತ ಹೆಸರಿನಲ್ಲಿ ಪ್ರಕಟಿಸಿದ್ದ ಅವರ ಮೊದಲ ಕವನ... ಹೀಗೆ ಅವರ ಕವನಗಳ ಮೂಲ ಆಶಯಗಳನ್ನು, ಸಂದೇಶಗಳನ್ನು ಇಲ್ಲಿ ಓದುಗರಿಗೆ ನೀಡಿರುವ ಮಹತ್ವದ ಕೃತಿ. ರವೀಂದ್ರನಾಥ ಠಾಕೂರರು ಕಾವ್ಯ ವಲಯದಲ್ಲಿ ಸಂಚರಿಸಿ ಅನುಭವಿಸಿದ ಹಿತವನ್ನೇ ಈ ಕೃತಿಯ ಸಾಹಿತ್ಯದಲ್ಲಿ ಕಾಣಬಹುದು.

About the Author

ಜಿ. ರಾಮನಾಥ್ ಭಟ್

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಜಿ. ರಾಮನಾಥ ಭಟ್ ಅವರು ಮೈಸೂರು ನಿವಾಸಿಯಾಗಿದ್ದಾರೆ. ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್‌ನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮ (1959) ಪಡೆದಿರುವ ಅವರು ಮೂರು ವರ್ಷ ಮಹಾರಾಷ್ಟ್ರದ ಕೊಯ್ನಾ ಜಲ ವಿದ್ಯುತ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದರು. 1962ರಿಂದ ಮೂವತ್ತೈದು ವರ್ಷ ಕರ್ನಾಟಕದ ಲೋಕೋಪಯೋಗಿ ಹಾಗೂ ನೀರಾವರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ 1997ರಲ್ಲಿ ಸ್ವಯಂ ನಿವೃತ್ತರಾದರು. 1986ರಿಂದ ಕೃಷ್ಣರಾಜಸಾಗರದಲ್ಲಿರುವ ಇಂಜಿನಿಯರಿಂಗ್ ಸಿಬ್ಬಂದಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ. ಶಾಲಾ ದಿನಗಳಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿದ್ದ ಅವರು ಅರುವತ್ತರ ದಶಕದಲ್ಲಿ ರವೀಂದ್ರನಾಥ ಠಾಕೂರರ ಸಾಹಿತ್ಯದತ್ತ ಆಕರ್ಷಿತರಾದರು. ಸರ್ಕಾರಿ ಕೆಲಸದಲ್ಲಿದ್ದರೂ ರವೀಂದ್ರನಾಥ ...

READ MORE

Related Books