ನ್ಯಾಮತಿ ಪಂಡಿತ ಪ್ರಭಣ್ಣನವರ ಕನ್ನಡ- ಕನ್ನಡ ನಿಘಂಟನ್ನು ಲೇಖಕ ಬಿದರಹಳ್ಳಿ ನರಸಿಂಹಮೂರ್ತಿ ಸಂಪಾದಿಸಿದ್ದಾರೆ. ಈ ಗ್ರಂಥವು ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅನುಪಮ ಕೊಡುಗೆಯಾಗಿದೆ. ಕನ್ನಡ ಪದಕೋಶಗಳನ್ನು ಹತ್ತಿರದಿಂದ ಬಲ್ಲವರಿಗೆ ನ್ಯಾಮತಿ ಪಂಡಿತ ಪ್ರಭಣ್ಣನವರ ಹೆಸರು ಗೊತ್ತಿರುತ್ತದೆ. ಪ್ರಭಣ್ಣನವರು ನೋಡಿರುವ ಆಕರಗಳು ಅವರ ಓದಿನ ಹರವನ್ನು ತೋರಿಸುತ್ತದೆ. ಆ ಎಲ್ಲ ಆಕರಗಳನ್ನು ನೋಡಿ ನಮೂದುಗಳನ್ನು ಆಯ್ದು ಉಲ್ಲೇಖಗಳನ್ನು ಪಟ್ಟಿಮಾಡಿ ಬಳಿಕ ತಿರುಳನ್ನು ಗುರುತು ಮಾಡುವ ಕೆಲಸವನ್ನು ಮಾಡಿದ್ದಾರೆ. ಇದೆಲ್ಲವೂ ನುಡಿಯ ಒಳ ಹರಿವಿನ ಆಳವಾದ ಅರಿವಿರುವವರಿಗೆ ಮಾತ್ರ ಆಗುವ ಕೆಲಸ ಜೊತೆಗೆ ದಣಿವಿಲ್ಲದ ದುಡಿಮೆಯೂ ಬೇಕಾಗುತ್ತದೆ. ಇವೆಲ್ಲವನ್ನೂ ಪ್ರಭಣ್ಣನವರು ಹೊಂದಿದ್ದರು ಎಂಬುದಕ್ಕೆ ಈ ಕೃತಿಯ ಪುಟಪುಟವೂ ಪುರಾವೆ ನೀಡುತ್ತವೆ.
©2024 Book Brahma Private Limited.