`ನೀಲ ತಿಮಿಂಗಿಲದ ಹೃದಯ’ -46 ವೈಜ್ಞಾನಿಕ ಪ್ರಬಂಧಗಳ ಸಂಕಲನ. ಒಂದಕ್ಕಿಂತ ಇನ್ನೊಂದು ಲೇಖನ ಸಂಪೂರ್ಣವಾಗಿ ಭಿನ್ನ. ಆದರೆ ಪ್ರತಿ ಲೇಖನವೂ ಕುತೂಹಲವನ್ನು ಕೆರಳಿಸುತ್ತಲೇ ಹೋಗುತ್ತದೆ. ಭೂಗ್ರಹದಲ್ಲಿ ಜೀವಿಸಿರುವ ಮಹಾ ದೈತ್ಯ ನೀಲ ತಿಮಿಂಗಿಲ, ಆಫ್ರಿಕದ ಆಮೆಗಳಿಗಿಂತ ಒಂದೊಂದೂ 14 ಪಟ್ಟು ಹೆಚ್ಚು ತೂಕ, ತಿಮಿಂಗಿಲದ ಮರಿ ಪ್ರತಿದಿನವೂ 380 ಲೀಟರ್ ಹಾಲನ್ನು ತಾಯಿಯ ಮೊಲೆಯಿಂದ ಹೀರುತ್ತದೆ. ಈ ಬಗೆಯ ಕುತೂಹಲ ಎಲ್ಲ ಲೇಖನಗಳಲ್ಲೂ ಇದೆ.
ಜರ್ಮನಿಯ ಸಿ.ಎಫ್.ಎಸ್. ಬಲ್ಬ್ ಗಳಲ್ಲಿ ಕೇವಲ 5 ಮಿಲಿಗ್ರಾಂ ಪಾದರಸವಿದ್ದರೆ, ಭಾರತದ ಬಲ್ಬ್ ಗಳಲ್ಲಿ 21 ಮಿಲಿಗ್ರಾಂ ಪಾದರಸ. ಕಾರ್ಬನ್ ಡೈ ಆಕ್ಸೈಡ್ ಅನ್ನು ಹೀರಿ ಹೂತರೆ ಅದೇ ಒಂದು ನಿಕ್ಷೇಪವಾಗುತ್ತದಲ್ಲವೆ? ಗೆದ್ದಲು ಹುಳುಗಳು ತಮ್ಮ ಎಂಜಲಿನಿಂದಲೇ ಕಟ್ಟುವ ಗೂಡುಗಳು ಯಾವ ಎಂಜಿನಿಯರಿಂಗ್ ತಂತ್ರಕ್ಕಿಂತಲೂ ಕಡಿಮೆ? ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಮುನ್ನವೇ ಅದನ್ನು ಹಿಮ್ಮೆಟ್ಟಿಸಲೂ ಸಾಧ್ಯ. ಶನಿಗ್ರಹಕ್ಕೆ ಎಲ್ಲಿಂದ ಬಂದವು ಉಂಗುರಗಳು? ಚಂದ್ರನಿಲ್ಲದಿದ್ದರೆ ಭೂಮಿ ಹೇಗಿರುತ್ತಿತ್ತು? ಮನುಷ್ಯ ವಿಕಾಸನಾಗುತ್ತಿದ್ದಾನೆಯೆ, ಎಲ್ಲಿದೆ ಸಾಕ್ಷಿ? ಇಂಥ ಕುತೂಹಲ ನಿಮಗಿದ್ದರೆ ಈ ಸಂಗ್ರಹದ ಲೇಖನಗಳು ನಿಮಗೆ ಉತ್ತರಿಸುತ್ತವೆ.
©2024 Book Brahma Private Limited.