ಮೇರುಗುರು ಕೈವಾರ ತಾತಯ್ಯ ವಿಜಯ ಪದ್ಮಶಾಲಿ ಅವರ ಕೃತಿಯಾಗಿದೆ. ಕೈವಾರದ ಯೋಗಿನಾರೇಯಣ ಯತೀಂದ್ರರ ಕುರಿತು ಒಂದು ಸಮಗ್ರವಾದ ಚಿತ್ರಣವನ್ನು ನೀಡಲು ಮಹಿಳೆ ಮುಂದಾಗಿರುವುದು ಇದೇ ಮೊದಲು... ಸ್ಥಳೀಯ ಐತಿಹ್ಯಗಳನ್ನು ಕುರಿತು ಒಂಬತ್ತು ಪದ್ಯಗಳನ್ನು ಬರೆದಿದ್ದೀರಿ. ಸರಳ ಸುಂದರವಾಗಿವೆ. ಭಾವಪೂರ್ಣವಾಗಿವೆ. ನೆಲದ ಹಿರಿಮೆ ಗರಿಮೆಗಳನ್ನು ಕಟ್ಟಿಕೊಟ್ಟಿವೆ. ಮುಕ್ತಕದಲ್ಲಿ ಅಪೂರ್ವವಾದಂತಹ ಕ್ರಿಯಾಶೀಲ ಮನೋಭಾವವನ್ನು ವ್ಯಕ್ತಪಡಿಸಿದ್ದೀರಿ..... ನಿಮಗೆ ತುಂಬು ಹೃದಯದ ಅಭಿನಂದನೆಗಳು ನಿಮ್ಮ ಕಾವ್ಯ ಗಣನೀಯ ಹಾಗೂ ಮನನೀಯ ಕಾವ್ಯವಾಗುತ್ತದೆ. ಕನ್ನಡ ನಾಡಿನಲ್ಲಿ ತನ್ನದೇ ಛಾಪು ಮೂಡಿಸುತ್ತದೆ. ಕವಿತಾಕೃಷ್ಣ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.