ಕಾವ್ಯಸಾಮ್ರಾಜ್ಯ

Author : ಬಿ.ಎಂ. ಶ್ರೀಕಂಠಯ್ಯ (ಬಿಎಂಶ್ರೀ )

Pages 131




Year of Publication: 1934
Published by: ಕಿರಿಯರ ಪ್ರಪಂಚ

Synopsys

ಕಾವ್ಯಸಾಮ್ರಾಜ್ಯ ಎಂಬ ಕಾವ್ಯ ಪುಸ್ತಕವು ಬಿ. ಎಂ. ಶ್ರೀಕಂಠಯ್ಯ ಅವರ ಕವನಗಳ ಸಂಗ್ರಹವಾಗಿದೆ. ಈ ಕೃತಿಯಲ್ಲಿ ಅರುಣವಾಯಿತು ಉದಯವಾಯಿತು ಕತ್ತಲೆಯ ಹೆಸರು ಕೂಡ ಮರೆತು ಹೋಯಿತು. ಕನ್ನಡ ನಾಡಿನ ಊರುಗಳಲ್ಲಿ, ಹಳ್ಳಿಗಳಲ್ಲಿ, ಬಯಲು ಗಳಲ್ಲಿ, ತೋಪುಗಳಲ್ಲಿ ಎಲ್ಲೆಲ್ಲೂ ಹಾಡಿನ ಸವಿಯು ಕೇಳಿಸುತ್ತಿದೆ. ಎಲ್ಲಾ ಕಡೆಯ ಕಿರಿಯ ಮಕ್ಕಳು, ಹಿರಿಯ ಮಕ್ಕಳು ಕನ್ನಡಮ್ಮನ ಪಾದದಲ್ಲಿ ಅವಳಲ್ಲಿ ಭಾರತಮ್ಮನೂ ಒಂದೇ ಆಗಿ ಕಲೆತುಕೊಂಡಿದ್ದಾಳೆ. ಭಕ್ತಿಯ ಅರಳುಗಳನ್ನು ಚೆಲ್ಲುತ್ತಿದ್ದಾರೆ ಎಂಬುದನ್ನು ಈ ಪುಸ್ತಕದಲ್ಲಿ ತಿಳಿಹೇಳುತ್ತದೆ.

About the Author

ಬಿ.ಎಂ. ಶ್ರೀಕಂಠಯ್ಯ (ಬಿಎಂಶ್ರೀ )
(03 January 1884 - 05 January 1946)

‘ಶ್ರೀ’ ಕಾವ್ಯನಾಮದ ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯನವರು ಬಿಎಂಶ್ರೀ ಎಂದೇ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತ. ತಂದೆ ಮೈಲಾರಯ್ಯ ತಾಯಿ ಭಾಗೀರಥಮ್ಮ. 1884ರ ಜನವರಿ 3ರಂದು ಜನಿಸಿದ ಶ್ರೀಕಂಠಯ್ಯನವರು ಮೈಸೂರಿನಲ್ಲಿ ಪ್ರೌಢ ಶಿಕ್ಷಣ ಪಡೆದ ನಂತರ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ.  (1903) ಪದವಿಯನ್ನು, ಮದರಾಸಿನಲ್ಲಿ ಬಿ. ಎಲ್ (1906) ಪದವಿ ಹಾಗೂ ಎಂ.ಎ (1907) ಪದವಿ ಪಡೆದರು. ಮೈಸೂರು ಮಹಾರಾಜ ಕಾಲೇಜಿನ ಪ್ರಾಧ್ಯಾಪಕರಾಗಿ (1911) ನೇಮಕಗೊಂಡು 30 ವರ್ಷ ಕಾರ್ಯ ನಿರ್ವಹಿಸಿದರು. ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ (1926-1930) ಆಗಿ ನಂತರ ಗೌರವ ಕನ್ನಡ ಪ್ರಾಧ್ಯಾಪಕರಾಗಿ (1927) ಆಮೇಲೆ ಬೆಂಗಳೂರು ಸೆಂಟ್ರಲ್ ...

READ MORE

Related Books