ಕನ್ನಡ ನಾಡು-ನುಡಿ ಹಿತ ಚಿಂತಕ ಆರ್. ನರಸಿಂಹಾಚಾರ್ ಅವರ ರಚಿಸಿದ ಕರ್ಣಾಟಕ ಶಬ್ದಾನುಶಾಸನಂ ಭಾಷ್ಯ ಮಂಜರಿ ಕೃತಿಯು ಕನ್ನಡ ವ್ಯಾಕರಣ ವಲಯದಲ್ಲಿ ಮಹತ್ವದ ಗ್ರಂಥ. ಉಪೋದ್ಘಾತ, ವೃತ್ತಿ ವ್ಯಾಖ್ಯಾ ಸಹಿತ ಕರ್ಣಾಟಕ ಶಬ್ದಾನುಶಾಸನ, ಪ್ರಥಮದಿಂದ ಚತುರ್ಥ ಪಾದದವರೆಗೂ ವಿವರಣೆ, ಸೂತ್ರ ಪಾಠ, ಸೂತ್ರ ವರ್ಣಾನುಕ್ರಮಣಿಕಾ, ಕನ್ನಡ ಶಬ್ದಾನುಶಾಸನದ ಸೂತ್ರಗಳಿಗೆ ಸಂವಾದಿಯಾದ ಶಬ್ದಮಣಿ ದರ್ಪಣ, ಕಾವ್ಯಾವಲೋಕ, ಕರ್ಣಾಟಕ ಭಾಷಾ ಭೂಷಣ ಇತ್ಯಾದಿಗಳ ವಿವರಣೆ, ಕನ್ನಡ ಗ್ರಂಥಗಳಿಂದ ಉದಾಹೃತ ಪದ್ಯಗಳು ಹೀಗೆ ವ್ಯಾಕರಣದ ಸಮಗ್ರ ಕೋನಗಳಿಂದ ಪರಿಶೀಲಿಸಿದ ಮಹತ್ವದ ಗ್ರಂಥವಿದು.
©2024 Book Brahma Private Limited.