ಕನ್ನಡದಲ್ಲಿ ಓದಲು-ಬರೆಯಲು ಕಲಿಯುವುದು, ಇಂಗ್ಲಿಷ್‌ನಂತಹ ಬೇರೆ ನುಡಿಗಳನ್ನು ಕಲಿಯುವುದು, ಕನ್ನಡದಿಂದ ಬೇರೊಂದು ನುಡಿಗೆ ಇಲ್ಲವೇ ಬೇರೊಂದು ನುಡಿಯಿಂದ ಕನ್ನಡಕ್ಕೆ ಅನುವಾದಿಸುವುದು ಮೊದಲಾದ ನುಡಿಗೆ ಸಂಬಂಧಿಸಿದಂತಹ ಹಲವಾರು ಕೆಲಸಗಳನ್ನು ನಡೆಸುವಲ್ಲಿ ಕನ್ನಡ ವ್ಯಾಕರಣ ನೆರವು ಕೊಡಬಲ್ಲುದು ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ. ಅದರ ಮೊದಲ ಭಾಗವಾಗಿ ಕನ್ನಡ ವ್ಯಾಕರಣ ಎಂತಹುದು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಈ ಕೃತಿಯು ಅದಕ್ಕೆ ನೆರವಾಗಲಿದೆ.
©2024 Book Brahma Private Limited.