ಕನ್ನಡ ಛಂದೋವಿಕಾಸ

Author : ಡಿ.ಎಸ್. ಕರ್ಕಿ

Pages 305

₹ 209.00

Buy Now


Year of Publication: 2016
Published by: ಭಾರತ್ ಪ್ರಕಾಶನ

Synopsys

ಖ್ಯಾತ ಸಾಹಿತಿ ಹಾಗೂ ಕವಿ ಡಿ.ಎಸ್. ಕರ್ಕಿ ಅವರ‘ ಕೃತಿ- ಕನ್ನಡ ಛಂದೋವಿಕಾಸ’ 1956 ರಲ್ಲಿ ಕನ್ನಡ ಛಂದಸ್ಸಿನ ಚರಿತ್ರೆ ಮತ್ತು ಸ್ವರೂಪದ ಆಧ್ವಯನ ಕೃತಿ ಇದು. ಪ್ರಾಚೀನ ಮತ್ತು ಆಧುನಿಕ ಕಾವ್ಯ ಭಾಗಗಳಿರುವ ಸಂಶೋಧನ ಮಹಾ ಪ್ರಬಂಧ.ಛಂದಶ್ಶಾಸ್ತ್ರದ ಅಧ್ಯಯನಕ್ಕೆ ಅಧಿಕೃತ ಆಕರ ಗ್ರಂಥವಾಗಿದ್ದ ಕನ್ನಡ ಛಂದೋವಿಕಾಸ ಅಚ್ಚಗನ್ನಡದ ದೇಸಿ ಛಂದಸ್ಸನ್ನು ವಿವೇಚಿಸಲಾಗಿದೆ. ತ್ರಿಪದಿ, ಕಂದ, ರಗಳೆ, ಸಾಂಗತ್ಯ, ಷಟ್ಪದಿ, ಅಕ್ಕರ, ಚೌಪದಿ, ಏಳೆ ಇತ್ಯಾದಿ ಅಚ್ಚಗನ್ನಡ ಛಂದೋಲಯಗಳ, ಚಾರಿತ್ರಿಕ ಮತ್ತು ಕಲಾತ್ಮಕ ನೆಲೆಯ ಚರ್ಚೆ ಈ ಕೃತಿಯು ಒಳಗೊಂಡಿದೆ.

About the Author

ಡಿ.ಎಸ್. ಕರ್ಕಿ
(15 November 1907 - 04 January 1984)

ಡಿ.ಎಸ್. ಕರ್ಕಿ ಎಂದೇ ಪ್ರಸಿದ್ಧರಾಗಿದ್ದ ಲೇಖಕ ದುಂಡಪ್ಪ ಸಿದ್ದಪ್ಪ ಕರ್ಕಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹಿರೇಕೊಪ್ಪದಲ್ಲಿ. ತಂದೆ- ಸಿದ್ದಪ್ಪ, ತಾಯಿ- ದುಂಡವ್ವ. ಪ್ರಾರಂಭಿಕ ಶಿಕ್ಷಣವನ್ನು ತಾಯಿಯ ತವರೂರಾದ ಬೆಲ್ಲದ ಬಾಗೇವಾಡಿಯಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ಕಾಲೇಜಿನಿಂದ ಪದವಿ ಪಡೆದರು. ಮುಂಬಯಿ ವಿಶ್ವವಿದ್ಯಾಲಯದಿಂದ ಬಿ.ಟಿ. ಪದವಿ ಜೊತೆಗೆ ಪ್ರೊ. ಕೆ.ಜಿ.ಕುಂದಣಗಾರರ ಮಾರ್ಗದರ್ಶನದಲ್ಲಿ ‘ಕನ್ನಡ ಛಂದಸ್ಸಿನ ವಿಕಾಸ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿಯನ್ನು ಪಡೆದರು. ಬಿ.ಟಿ. ಪದವಿ ಪಡೆದ ನಂತರ ಬೆಳಗಾವಿ, ಕಾರವಾರಗಳಲ್ಲಿ ಮಾಧ್ಯಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ಆನಂತರ ಬೆಳಗಾವಿ ...

READ MORE

Related Books