ಲೇಖಕ, ವಿಜ್ಞಾನಿ ಅಹಿತಾನಲ (ನಾಗ ಐತಾಳ) ಅವರು ಅಣು ಜೀವವಿಜ್ಞಾನದ ಒಂದು ಸ್ಥೂಲ ಪರಿಚಯವನ್ನು ನೀಡಿರುವ ಕೃತಿ ಜೀವನ ರಹಸ್ಯ. ಜೀವವಿಜ್ಞಾನದ ಪ್ರಮುಖ ಶಾಖೆಗಳನ್ನು ಸ್ಥೂಲವಾಗಿ ಪರಿಚಯಿಸಲು ನೋಡುತ್ತದೆ. ಒಬ್ಬ ವಿಜ್ಞಾನಿ ಮಾತ್ರ ಬರೆಯಬಲ್ಲಂತಹ ವೈಜ್ಞಾನಿಕ ಸೂಕ್ಷ್ಮಗಳ ಜೊತೆಗೆ ಐತಾಳರ ತುಂಬು ಜೀವನದ ಅನುಭಾವಗಳು ಮತ್ತು ವೈಚಾರಿಕತೆಯಿಂದಾಚೆಗೆ ನೋಡಬಲ್ಲ ತತ್ವಶಾಸ್ತ್ರಜ್ಞನ ಚಿಂತನೆಗಳೂ ಈ ಪುಸ್ತಕದಲ್ಲಿ ತುಂಬಿವೆ. ಒಂಟಿ ಕೋಶದಿಂದ ಆರಂಭವಾಗುವ ಜೀವ ಅನೇಕ ಹಂತಗಳ ಪ್ರಕೃತಿ ಕ್ರಿಯೆಗಳಿಂದಾಗಿ ಬಹುಕೋಶಗಳಾಗಿ ಪರಿವರ್ತಿತಗೊಂಡು ಅನೇಕ ಅವಯವಗಳನ್ನು ಹೊಂದುವ ಮತ್ತು ಯೋಚಿಸಬಲ್ಲಂತಹ ಸಂಕೀರ್ಣ ಜೀವವಾಗಿ ಮಾರ್ಪಾಡಾಗುವ ಕ್ರಿಯೆಯನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದಷ್ಟೇ ಸಹಜವಾಗಿ ಬಾಲಕುತೂಹಲದಿಂದಲೂ ನೋಡುವ ಮುಗ್ಧತೆಯನ್ನು ನಾಗ ಐತಾಳರು ಇಡೀ ಪುಸ್ತಕದಲ್ಲಿ ಉಳಿಸಿಕೊಂಡಿದ್ದಾರೆ
©2024 Book Brahma Private Limited.