ಜಗತ್ತಿಗೆ ಆಧುನಿಕತೆ ತಂದಿತ್ತ ವಿಜ್ಞಾನಿಗಳು ಆವಿಷ್ಕಾರ ಮತ್ತು ಸಂಶೋಧನೆಗಳ ಕಥೆ

Author : ಸೊಂದಲಗೆರೆ ಲಕ್ಷ್ಮೀಪತಿ

Pages 125

₹ 125.00




Published by: ಕಾವ್ಯಕಲಾ ಪ್ರಕಾಶನ

Synopsys

ಸೊಂದಲಗೆರೆ ಲಕ್ಷ್ಮೀಪತಿ ಅವರ ಕೃತಿ ‘ಜಗತ್ತಿಗೆ ಆಧುನಿಕತೆ ತಂದಿತ್ತ ವಿಜ್ಞಾನಿಗಳು ಆವಿಷ್ಕಾರ ಮತ್ತು ಸಂಶೋಧನೆಗಳ ಕಥೆ’. ವಿಜ್ಞಾನದ ನಾಗಾಲೋಟದ ಭರದಲ್ಲಿ ನಾವಿಂದು ನಿಂತಿದ್ದೇವೆ. ಕೆಲವು ದಶಕಗಳ ಹಿಂದಿನ ದಿನವನ್ನು ಮೆಲುಕು ಹಾಕಿದರೆ ಅಂದು ನಾವೆಷ್ಟು ಹಿಂದುಳಿದಿದ್ದೊ ಎನಿಸದೆ ಇರದು ಇಂದು. ಇಂದಿನ ಈ ಮುಂದುವರಿಕೆಯ ಹಿಂದೆ ಅದೆಷ್ಟೋ ಕಾಣದ ಕೈಗಳ ಚೈತನ್ಯ, ಶ್ರಮ, ಕ್ಷಮತೆ ಅಡಗಿದೆ. ಅವರು ಆವಿಷ್ಕರಿಸಿದ, ಸಂಶೋಧಿಸಿದ ಕ್ಷೇತ್ರಗಳಲ್ಲಿ ಅವರು ಪಟ್ಟ ಪಡಿಪಾಟಲು ನಮಗೆ ಸಂವಹನಗಳ, ಮಾಧ್ಯಮಗಳ ಮೂಲಕ ಹರಿದು ಬರದ ಹೊರತು ಅವರ ಪರಿಶ್ರಮ ಮತ್ತು ಕ್ಷಮತೆ ಹೇಗಾದರೂ ತಿಳಿದೀತು..? ಅಂತೆಯೇ ಈ ಹೊತ್ತಗೆಯಲ್ಲಿ 11ಮಂದಿ ಜಾಣ್ಮೆಯ, ಮಾನವೀಯ ಮವಲ್ಯದ ಚಿಂತನಶೀಲ ವ್ಯಕ್ತಿಗಳು ಈ ಜಗತ್ತನ್ನು ಹೇಗೆ ಆಧುನೀಕರಣಗೊಳಿಸಿದರೆಂದು ಚಿತ್ರಿಸಲಾಗಿದೆ.

About the Author

ಸೊಂದಲಗೆರೆ ಲಕ್ಷ್ಮೀಪತಿ

ಸೊಂದಲಗೆರೆ ಲಕ್ಷ್ಮಿಪತಿ ಅವರು ಉತ್ತಮ ಅನುವಾದಕರು. ಸ್ವತಃ ಲೇಖಕರು, ಕಥೆಗಾರರು ಆಗಿ ಉತ್ತಮ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ ಕೀರ್ತಿ ಇವರಿಗಿದೆ. ಭಾರತೀಯ ಪ್ರಾತಿನಿಧಿಕ ಕತೆಗಳು, ಬೌದ್ಧ ಧರ್ಮದ ಅನನ್ಯತೆ, ಸಾಮ್ರಾಟ ಅಶೋಕ, ಜಗತ್ತಿನ ಉದಾತ್ತ ಚಿಂತಕರು, ಅನ್ಯ ಲೋಕದಲ್ಲಿ ಜೀವಿಗಳಿದ್ದಾರೆಯೇ? ಶ್ರೇಷ್ಠ ಅನುವಾದಿತ ಕಥೆಗಳು ಹೀಗೆ ಅನುವಾದಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ...

READ MORE

Related Books