ಹೊಸಗನ್ನಡ ವ್ಯಾಕರಣ ಕುರಿತಂತೆ ವಿದ್ವಾಂಸ ಎನ್.ರಂಗನಾಥ ಶರ್ಮ ಅವರು ಬರೆದ ಕೃತಿ. 2010ರಲ್ಲಿ ಗದಗದಲ್ಲಿ ಜರುಗಿದ 76ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಪ್ರಕಟಿತ ಗ್ರಂಥವಿದು. ಬದಲಾಗುತ್ತಿರುವ ಸಾಹಿತ್ಯಕ ವೇಗಕ್ಕೆ ವ್ಯಾಕರಣವೂ ಪರಿವರ್ತನೆಗೊಳ್ಳಬೇಕು. ಆಗಲೇ ಭಾಷೆಗೂ ಹೊಸತನ ಲಭ್ಯವಾಗುತ್ತದೆ. ಅಕ್ಷರ ಪ್ರಕರಣ, ನಾಮ ಪ್ರಕರಣ, ಸಂಧಿ ಪ್ರಕರಣ, ಸ್ತ್ರೀ ಪ್ರತ್ಯಯಗಳು, ಕ್ರಿಯಾಪದ, ದ್ವಿರುಕ್ತಿ, ಸಮಾಸಗಳು, ಪ್ರಯೋಗ ಪ್ರಕರನ ಇತ್ಯಾದಿ ಅಂಶಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಲಾಗಿದೆ.
©2024 Book Brahma Private Limited.