1990 ರಿಂದ ಈವರೆಗೆ ಕವಿ ದೊಡ್ಡ ರಂಗೇಗೌಡ ಅವರು ಬರೆದ ಭಾವಗೀತೆಗಳನ್ನು ಸಂಕಲಿಸಿದ್ದೇ ‘ಗಾನಯಾನ’. ‘ಹಾಡಿನ ಮೂಲ ಹೃದಯದ ಭಾವ. ಅದು ಮೈದಳೆದ ಮೇಲೆ ಕುಸುರಿ ಕೆಲಸ. ಓದುಗನಿಗೆ ಸಿಗುವ ವಾಗರ್ಥದಾಚೆಯ ಧ್ವನಿಗೂ ಇದಕ್ಕೂ ಸಂಬಂಧವಿದೆ. ಅದು ಬೇರ್ಪಡಿಸಲಾಗದ ಈ ಚಿಂತನೆಗಳನ್ನು ಓದಿ, ಸವಿದು, ಚಿಂತಿಸಿ ಮುನ್ನಡೆದಿದೆ. ಆಗ ಹಾಡುಗಳು ನೀಡುವ ಮುದ ಅನಂತವಾದುದು. ವರ್ಣನಾತೀತ ವಾದುದು. ನನ್ನ ಹಾಡುಗಳಿಗೆ ಈ ಮಾತುಗಳೇ ಮುನ್ನುಡಿ’ ಎಂದು ಕವಿ ದೊಡ್ಡ ರಂಗೇ ಗೌಡರು ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಸಂಕಲನದಲ್ಲಿ ಒಟ್ಟು 213 ಭಾವಗೀತೆಗಳಿವೆ.
©2024 Book Brahma Private Limited.