ಬದುಕು ಮಹಾಕಾವ್ಯ ಸಂಪುಟ 2

Author : ಎನ್.ಆರ್‌. ನಾಯಕ

Pages 346

₹ 200.00




Year of Publication: 2017
Published by: ಗೋಧೂಳಿ ಪ್ರಕಾಶನ
Address: ಗೋಧೂಳಿ ಪ್ರಕಾಶನ, ೫ನೇ ಅಡ್ಡರಸ್ತೆ,ತುಂಗಾನಗರ,ಬೆಂಗಳೂರು 560091
Phone: 9448473811

Synopsys

ಬದುಕು ಮಹಾಕಾವ್ಯ ಸಂಪುಟ 2 ಇದು ಕವಿ ಎನ್.ಆರ್.ನಾಯಕರ ಸಂಕಲನಗಳ ಸಂಪುಟ.ಈ ಮಹಾಕಾವ್ಯದಲ್ಲಿ ದೇಸಿ ಮಾರ್ಗಯುತ ಹಿತನುಡಿ,ಕಟಕಿನುಡಿ,ಹಾಸ್ಯವಿಲಾಸ ನುಡಿಗಳಿವೆ.ರಸ,ಧ್ವನಿ ಶ್ಲೇಷೆ,ಅಲಂಕಾರದ ಸೊಬಗಿದೆ. ಲಲಿತ ಗಂಭೀರ ಗತಿಯ ವಿಭಿನ್ನ ಛಂದೋಲಾಸ್ಯ ತಾಂಡವಗಳಿವೆ. ನಯ, ನಾಜೂಕು, ಕೆಚ್ಚು, ಆಕ್ರೋಶ ಬಂಡಾಯ ಬಾವುಟಗಳಿವೆ. ನಾಡು ನುಡಿ ಬಗೆಗಿನ ಕಕ್ಕುಲಾತಿಯಿದೆ; ಉನ್ನತ ಜೀವನ ಮೌಲ್ಯಗಳ ಭಂಡಾರವಿದೆ; ಅಧ್ಯಾತ್ಮ ತತ್ತ್ವಜ್ಞಾನವಿದೆ, ಭಕ್ತಿ ಭಾವುಕತೆಗಳ ಹಳಹಳಿಕೆಯಿದೆ. ಈ ಸುಂದರ ಗಂಧವತಿ ವಸುಂಧರೆಯ ಪ್ರಕೃತಿ ಚೆಲುವಿನ ಬಹುಬಗೆಯ ಗಂಧದ ಹಸರಗಳಿವೆ. ವಿಶ್ವ ಪರಿಸರ ಕಾಳಜಿಯ ಧ್ವನಿಗಳಿವೆ; ಸಮನ್ವಯಯುತ ಸಹಬಾಳ್ವೆಯ ಅಭೀಷ್ಟೆಯಿದೆ; ವಿವಿಧ ಕಾವ್ಯ ಮಾರ್ಗಗಳ ಒಳದಾರಿಗಳಿವೆ: ವಿವಿಧ ಮತ ಪಂಥಗಳ ಸುವಿಚಾರ ಧಾರೆಗಳಿವೆ

About the Author

ಎನ್.ಆರ್‌. ನಾಯಕ
(28 June 1935)

ಕವಿ, ನಾಟಕಕಾರ, ಪ್ರಕಾಶಕ, ಸಂಘಟಕ, ಸಮಾಜಚಿಂತಕ, ಸಾಹಿತಿ ಎನ್.ಆರ್‌. ನಾಯಕ ಅವರು ಜನಿಸಿದ್ದು 1935 ಜೂನ್‌ 28ರಂದು. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಭಾವಿಕೇರಿಯಲ್ಲಿ ಜನನ. ಇವರ ಪೂರ್ಣ ಹೆಸರು ನಾರಾಯಣ ರಾಮ ನಾಯಕ. ತಂದೆ ರಾಮನಾಯಕರು. ತಾಯಿ ದೇವಮ್ಮ. ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ಯ್ರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಇವರು ಬಿ.ಎ. ಪದವಿ ಪಡೆದರು. ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಇವರು ಸಾಹಿತ್ಯ ಕೃಷಿಯಲ್ಲಿಯು ತೊಡಗಿಸಿಕೊಂಡಿದ್ದ ಇವರು ಹಲವು ಕೃತಿಗಳನ್ನು ರಚಿಸಿದ್ದಾರೆ. ಪ್ರಾಧ್ಯಾಪಕರಾಗಿ, ಪ್ರಾಚಾರ್‍ಯರಾಗಿ ಶಿಕ್ಷಣ ಕ್ಷೇತ್ರದಲ್ಲಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ಜನಪದ ಸಾಹಿತ್ಯದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವ ಅವರು ಸುಗ್ಗಿ ಕುಣಿತ, ಗುಮಟೆ ಪಾಂಗು, ...

READ MORE

Related Books