`ಬಿ. ಎಚ್. ಶ್ರೀಧರ ಸಮಗ್ರ ಸಾಹಿತ್ಯ ಸಂಪುಟ-1 ಕಾವ್ಯ’ ಕೃತಿಯು ರಾಜಶೇಖರ ಹೆಬ್ಬಾರ ಅವರ ವಿಮರ್ಶಾತ್ಮ ಬರವಣಿಗೆಯಾಗಿದೆ. ಕಾವ್ಯ ಎಂಬ ಈ ಸಂಪುಟದಲ್ಲಿ ಈ ಮೊದಲು ಪ್ರಕಟಿತವಾದ ಕವನ ಸಂಕಲನಗಳಾದ ಮೇಘನಾದ, ಕಿನ್ನರಗೀತ, ಅಮೃತಬಿಂದು, ರಸಯಜ್ಞ, ಮುತ್ತುರತ್ನ, ನೌಕಾಗೀತ, ಕದಂಬವೈಭವ, ಕಂಟಕಾರಿ ಮಹಾಕಾವ್ಯಂ, ಮತ್ತು ಜಾತವೇದ ಎಂಬ ಒಂಭತ್ತು ಕವನ ಸಂಕಲನಗಳ ಕವನಗಳು, ಅಡಕವಾಗಿವೆ.
ಪ್ರೊ. ಎಚ್.ಆರ್ ಅಮರನಾಥರ ‘ಪರಂಪರೆಯ ಕಾವಲುಗಾರ’ ಎಂಬ ಲೇಖನ ಶ್ರೀಧರರ ಕಾವ್ಯದ ಮೂಲ ನಿಲುವನ್ನು, ಒಲವನ್ನು ಗುರುತಿಸಿ ಸಮರ್ಪಿಸುತ್ತದೆ. 1945ರಲ್ಲಿ ಪ್ರಕಟವಾದ ಮೇಘನಾದ ಕವನ ಸಂಕಲನದೊಂದಿಗೆ ಆರಂಭವಾದ ಅವರ ಸಾಹಿತ್ಯಕೃಷಿ 1988ರಲ್ಲಿ ಬಂದ ಭಾರತೀಯ ಮೂರ್ತಿಶಿಲ್ಪ ಗ್ರಂಥದವರೆಗೂ ಅವಿತರವಾಗಿ ನಡೆಯಿತು. ಕಾವ್ಯ, ವಿಮರ್ಶೆ, ವೈಚಾರಿಕ ಪ್ರಬಂಧಗಳು, ವಿಡಂಬನೆ, ಇತಿಹಾಸ, ನಾಟಕ, ಯಕ್ಷಗಾನ, ಅನುವಾದ, ಇತ್ಯಾದಿ ಬಹುತೇಕ,ಎಲ್ಲ ಪ್ರಕಾರಗಳಲ್ಲೂ ಅವರ ಕೊಡುಗೆ ಇದೆ. ಆದರೆ ಪ್ರಮಾಣದಿಂದಾಗಿ ಅಲ್ಲ. ಅವುಗಳೆಲ್ಲವೂ ಸಮ್ಯಗ್ ಜೀವನಕ್ಕೆ ಪೋಷಕವಾದ ಮೌಲ್ಯಗಳನ್ನು ಪ್ರತಿಪಾದಿಸುವುದರಿಂದ ಮಹತ್ವವೆನಿಸಿದೆ. ಶ್ರೇಷ್ಟ ಕಾವ್ಯಗಳಾದ ರಾಮಾಯಣ-ಮಹಾಭಾರತಗಳನ್ನು ಪೂಜಿಸಿದಷ್ಟೇ ಭಕ್ತಿಯಿಂದ ವಾಲ್ಮೀಕಿ- ವ್ಯಾಸರನ್ನೂ ಪೂಜಿಸುವ ಭಾರತೀಯ ಮನೋಭಾವ ಬದುಕು ಬರಹಗಳಿಗೆ ಸಮಾನ ಮಹತ್ವ ನೀಡುತ್ತದೆ.
©2025 Book Brahma Private Limited.