ಅಮರಸಿಂಹನ ನಾಮಲಿಂಗಾನುಶಾಸನವನ್ನು ಅಮರಕೋಶ (ನಿಘಂಟು) ಎಂದೇ ಕರೆಯಲಾಗುತ್ತದೆ. ಈತನ ಕಾಲವನ್ನು 6ನೇ ಶತಮಾನ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಅಮರಸಿಂಹನು ಮಹಾಯಾನ ಬೌದ್ಧಮತಕ್ಕೆ ಸೇರಿದವನೆಂದು ಹೇಳಲಾಗುತ್ತದೆ. ಅಮರಕೋಶದ ಆದಿಯಲ್ಲಿರುವ ‘ಯಸ್ಯ ಜ್ಞಾನ ದಯಾಸಿಂಧೋ...’ ಎಂಬ ಮಂಗಳಶ್ಲೋಕಕ್ಕೆ ಕ್ಷೀರಸ್ವಾಮಿಯು ಬುದ್ಧನ ಪರವಾಗಿ ಅರ್ಥ ಬರೆದಿದ್ದಾನೆ ಎಂಬುದು ಸಾಕ್ಷಿ. ಆದರೆ, ಈ ಅಭಿಪ್ರಾಯಕ್ಕೆ ಬಹು ವಿದ್ವಾಂಸರ ವಿರೋಧವೂ ಇದೆ. ಭಾಷೆಯ ಮೇಲೆ ಪ್ರಭುತ್ವ ಬರಬೇಕಾದರೆ ವ್ಯಾಕರಣ ಶಾಸ್ತ್ರದ ಮತ್ತು ಅಮರಕೋಶಗಳ ಅಧ್ಯಯನ ಅಗತ್ಯ.ಸಂಸ್ಕೃತ ಭಾಷಿಕರಿಗೂ, ಕನ್ಕಡ ವೈಯ್ಯಾಕರಣಿಗಳಿಗೂ ಈ ಗ್ರಂಥ ಮಹತ್ವದ್ದು ಎಂದು ಅಭಿಪ್ರಾಯಪಡಲಾಗುತ್ತದೆ.
©2024 Book Brahma Private Limited.