ಚಂದ್ರಮೌಳಿ ಎಸ್. ನಾಯ್ಕರ್ ಅವರು ಮೂಲತಃ ಧಾರವಾಡದವರು. ಕರ್ನಾಟಕ ರಾಜ್ಯದ ಸಂಸ್ಕೃತ ವಿವಿ ಕುಲಸಚಿವರಾಗಿದ್ದರು. ಯೋಗ, ಸಂಸ್ಕೃತ ಹಾಗೂ ಪ್ರಾಕೃತಗಳಲ್ಲಿ ಆಸ್ಥೆಯುಳ್ಳವರು. ಅವರ ಸಂಶೋಧನ ಲೇಖನಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಅವರ ಸಂಸ್ಕೃತ ನಾಟಕಗಳು ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗಿದೆ. ಸಂಸ್ಕೃತ ಭಾಷೆ ಹಾಗೂ ಸಾಹಿತ್ಯಕ್ಕೆ ನೀಡಿರುವ ವಿಶಿಷ್ಟ ಕೊಡುಗೆಗಾಗಿ ಕೆನಡಾ ದೇಶದ ಸರಸ್ವತಿ ವಿಕಾಸ ಕೆನಡಾ ಸಂಸ್ಥೆಯು 1997ರ ಪ್ರತಿಷ್ಟಿತ ‘ಅಂತಾರಾಷ್ಟ್ರೀಯ ರಾಮಕೃಷ್ಣ ಸಂಸ್ಕೃತ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ಪ್ರಾಕೃತದಲ್ಲಿ ಸಟ್ಟಕ ಸಾಹಿತ್ಯ: ಒಂದು ಪರಿಚಯ’ ಕೃತಿ ರಚಿಸಿದ್ಧಾರೆ.