ವೃತ್ತಿಯಲ್ಲಿ ಪತ್ರಿಕೋದ್ಯಮ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಎನ್.ಕೆ ಪದ್ಮನಾಭ ಅವರು ರಚಿಸಿರುವ ಕೃತಿ ‘ಪತ್ರಿಕೋದ್ಯಮ ಮತ್ತು ವಾಸ್ತವ’. ಈ ಕೃತಿಯಲ್ಲಿ ಪತ್ರಿಕೋದ್ಯಮ ಎಂದರೇನು? ಪ್ರಸ್ತುತ ದಿನಮಾನದಲ್ಲಿ ಸುದ್ದಿಯ ಮಹತ್ವ ಹಾಗೂ ಮರುವ್ಯಾಖ್ಯಾನದ ಅಗತ್ಯತೆಯ ಕುರಿತು ವಿವರಿಸಲಾಗಿದೆ. ಸುದ್ದಿ: ಸತ್ವ ಮತ್ತು ತತ್ವ, ಸುದ್ದಿಯ ಮರುವ್ಯಾಖ್ಯಾನದ ಅನಿವಾರ್ಯತೆ, ‘ವಾಸ್ತವ’ದೊಂದಿಗಿನ ಮುಖಾಮುಖಿ, ಓದು: ಗ್ರಹಿಕೆಯ ಸಾಧ್ಯತೆಗಳು, ಸಂವೇದನೆಯ ಶಕ್ತಿ ಮತ್ತು ಅಭಿವ್ಯಕ್ತಿಯ ಅನನ್ಯತೆಯ ವಿಶ್ಲೇಷಣೆ ಈ ಕೃತಿಯಲ್ಲಿದೆ.
©2024 Book Brahma Private Limited.