ವಿಜ್ಞಾನ ಜಗತ್ತಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಸಂವಹನ ಕೃತಿ- ‘ವಿಜ್ಞಾನ ಪತ್ರಿಕೋದ್ಯಮ’ ಲೇಖಕ ಪ್ರೊ. ಸುಧೀಂದ್ರ ಹಾಲ್ದೊಡ್ಡೇರಿ ಅವರು ಮಾಧ್ಯಮದಲ್ಲಿ ವಿಜ್ಞಾನ ಬರವಣಿಗೆಯ ಮಹತ್ವ, ಅಗತ್ಯದ ಕುರಿತು ಈ ಕೃತಿಯಲ್ಲಿ ಚರ್ಚಿಸಿದ್ದಾರೆ. ‘ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಕನ್ನಡ ಪತ್ರಿಕೆಗಳ ಪಾತ್ರ ಬಹುದೊಡ್ಡದು. ವಿಜ್ಞಾನ ಬರಹಗಳ ಪ್ರಕಟಣೆಯ ದೃಷ್ಟಿಯಿಂದಲೂ ಕನ್ನಡ ಪತ್ರಿಕೆಗಳ ಪ್ರತಿಸ್ಪಂದನ ಗಮನಾರ್ಹ. ಕೇವಲ ವಿಜ್ಞಾನ ಬೋಧಕರಿಗೆ ಸೀಮಿತವಾಗಿದ್ದ ಕನ್ನಡ ವಿಜ್ಞಾನ ಬರಹದಂಗಳವು ಕನ್ನಡ ಬಲ್ಲ ವಿಜ್ಞಾನಿಗಳಿಗೆ, ಎಂಜಿನಿಯರ್‌ಗಳಿಗೆ, ಸಾಫ್ಟ್‌ವೇರ್ ತಂತ್ರಜ್ಞರಿಗೆ ಮುಕ್ತವಾಗಿದೆ. ಶಾಲಾ-ಕಾಲೇಜುಗಳಲ್ಲಿ ವಿಜ್ಞಾನ ಕಲಿತು ಮರೆತು ಹೋಗಿದ್ದವರಿಗೆ ಮಾಧ್ಯಮಗಳು ವಿಜ್ಞಾನದ ಬೆಳವಣಿಗೆಯನ್ನು ಸತತವಾಗಿ ತಿಳಿಸಲು ಸಜ್ಜಾಗಿವೆ’. ಈ ನಿಟ್ಟಿನಲ್ಲಿ ಈ ಕೃತಿ ಪ್ರಮುಖ ಎಂಬುದು ಪುಸ್ತಕದ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. .
©2024 Book Brahma Private Limited.