ವೃತ್ತಪತ್ರಿಕೆಗಳಿಗೆ ಸಂಬಂಧಿಸಿ ಸಂಪೂರ್ಣ ವಿವರ ನೀಡುವ ಕೃತಿ-ವೃತ್ತಪತ್ರಿಕೆಗಳು, ಅವುಗಳ ಚರಿತ್ರೆ, ಕರ್ತವ್ಯ, ಅಪೇಕ್ಷೆ ಸ್ವಾತಂತ್ಯ್ರಗಳು. ಈ ಕೃತಿಯಲ್ಲಿ ವೃತ್ತಪತ್ರಿಕೆಗಳು ಜಾಗತಿಕವಾಗಿ ನಡೆದು ಬಂದ ದಾರಿ, ಯಂತ್ರೋಪಕರಣಗಳ ಬದಲಾವಣೆ, ಹಿಂದೂಸ್ತಾನದಲ್ಲಿ ನಂತರ ಕರ್ಣಾಟಕದಲ್ಲಿ ಪತ್ರಿಕೋದ್ಯಮ, ವೃತ್ತಪತ್ರಿಕೆಗಳ ಕರ್ತವ್ಯ, ಅವುಗಳಿಗೆ ಸಲ್ಲಬೇಕಾದ ಸಹಾಯಗಳು, ಪತ್ರಿಕೆಯೂ ಒಂದು ರಾಜ್ಯಾಂಗ, ಪತ್ರಿಕೋದ್ಯಮದ ಮೋಹ, ಕಷ್ಟದ ಜೀವನ, ವೃತ್ತ ಪತ್ರಿಕಾ ಸ್ವಾತಂತ್ಯ್ರ, ನಿರ್ಬಂಧ ಕಲ್ಪನೆಯ ನಾಲ್ಕು ತತ್ವಗಳು ಹೀಗೆ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಹಾಗೂ ಈ ವೃತ್ತಿಯ ಅಪಾಯಗಳ ಕುರಿತು ಒಳನೋಟವನ್ನು ಲೇಖಕ ಡಿ.ವಿ.ಗುಂಡಪ್ಪನವರು ನೀಡಿದ್ದಾರೆ.
©2024 Book Brahma Private Limited.