ಧಾರವಾಡದ ಮೊಟ್ಟ ಮೊದಲ ವೃತ್ತಾಂತ ಪತ್ರಿಕೆ ’ಚಂದ್ರೋದಯ’ ಕುರಿತು ಪತ್ರಕರ್ತ ಎನ್. ದಿನೇಶ್ ನಾಯಕ್ ಬರೆದಿರುವ ಪರಿಚಯ ರೂಪದ ಗ್ರಂಥ ಇದು. ಕನ್ನಡ ಪತ್ರಿಕಾರಂಗದಲ್ಲಿ ಹೊಸತನದ ಛಾಪು ಮೂಡಿಸಿದ್ದ ’ಚಂದ್ರೋದಯ’ ಪತ್ರಿಕೋದ್ಯಮದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿತು. ಜನಸಾಮಾನ್ಯರಲ್ಲಿ ರಾಷ್ಟ್ರೀಯ ಮನೋಭಾವನೆಯ ಜೊತೆಯಲ್ಲಿಯೇ ತಾಯ್ನುಡಿಯ ಬಗ್ಗೆ ಪ್ರೀತಿ, ಅಭಿಮಾನ, ಮೂಡಿಸಿ ಕನ್ನಡದ ಪುನರುಜ್ಜೀವನ ಸಾಧಿಸುವುದು ಇದರ ಧ್ಯೇಯವಾಗಿತ್ತು. ನಂತರದಲ್ಲಿ ನಡೆದ ಕನ್ನಡ ಚಳವಳಿಗೆ ಬೆನ್ನೆಲುಬಾಗಿ ನಿಂತ ಮೊದಲ ಪತ್ರಿಕೆ ಚಂದ್ರೋದಯದ ಬಗ್ಗೆ ವಿಶೇಷವಾಗಿ ತಿಳಿಸಿಕೊಡುವ ಕೃತಿ ಆಸಕ್ತ ಸಂಶೋಧಕರಿಗೆ ಉಪಯುಕ್ತ ಆಕರವಾಗಿದೆ.
©2025 Book Brahma Private Limited.