‘ಕಲ್ಲೆ ಶಿವೋತ್ತಮ ರಾವ್: ಜನಪ್ರಗತಿಯ ಪಂಜು’ ಇದು ಲೇಖಕ, ಪತ್ರಕರ್ತ ಪಾರ್ವತೀಶ ಬಿಳಿದಾಳೆ ಅವರ ಸಂಪಾದನೆಯಲ್ಲಿ ಪ್ರಕಟವಾಗಿರುವ ಕೃತಿ. ಕಲ್ಲೆ ಶಿವೋತ್ತಮ ರಾವ್ ಕನ್ನಡ ಪತ್ರಿಕೋದ್ಯಮದ ಇತಿಹಾಸದ ಏರಿಳಿತದ ಹಾದಿಯಲ್ಲಿ, ಸಾಮಾಜಿಕ ನ್ಯಾಯಕ್ಕಾಗಿ ಸತತವಾಗಿ ಉರಿದ ಬೆಂಕಿ ಮತ್ತು ಬೆಳಕಿನ ಪಂಜು ಎಂದಿದ್ದಾರೆ ಪಾರ್ವತೀಶ ಬಿಳಿದಾಳೆ. ಕಲ್ಲೆ ಶಿವೋತ್ತಮ ರಾವ್ ಅವರು ಕನ್ನಡ ಪತ್ರಿಕೋದ್ಯಮದ ಹಿರಿಯರಲ್ಲಿ ಪ್ರಮುಖರು. ಹುಟ್ಟಿದ್ದು ಕಾರ್ಕಳ ಬಳಿಯ ಕಲ್ಯ ಗ್ರಾಮದಲ್ಲಿ, ಅದೇ ನಂತರ ಕಲ್ಲೆ ಆಗಿ ಅವರ ಹೆಸರಿನೊಂದಿಗೆ ಸೇರಿತು. ತಂದೆ ನಾರಾಯಣ ಕಲ್ಲೆ ಹಾಗೂ ಅವರ ತಂದೆ ಮೂಡ್ಲಿ ಮಂಜಪ್ಪನವರೂ ಸಹ ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಪತ್ರಕರ್ತರು ಹಾಗೂ ಬರಹಗಾರರಾಗಿದ್ದರು. ಪತ್ರಿಕೋದ್ಯಮದಲ್ಲಿ ಅವರು ನಿರ್ವಹಿಸಿದ ಮಹತ್ವದ ಪಾತ್ರದ ಮೇಲೆ ಈ ಕೃತಿ ಬೆಳಕು ಚೆಲ್ಲುತ್ತದೆ.
©2025 Book Brahma Private Limited.