ಈ ಕೃತಿಯಲ್ಲಿ ಸಂವಹನ ಮತ್ತು ಸಮೂಹ ಸಂವಹನ ಮಾಧ್ಯಮಗಳ ಎಲ್ಲ ಆಯಾಮಗಳನ್ನು ಸೈದ್ಧಾಂತಿಕ ವಾಗಿ ಮತ್ತು ಸೃಜನಶೀಲತೆಯ ಅನ್ವೇಷಣೆಯ ಹಾದಿಯಲ್ಲಿ ವಿಶದವಾಗಿ ಪರಿಶೀಲಿಸಲಾಗಿದ್ದು ಕನ್ನಡ ಅಭಿವೃದ್ಧಿಯ ವಿನ್ಯಾಸದ ಹಾದಿಯಲ್ಲಿ ದೂರದರ್ಶನ, ಆಕಾಶವಾಣಿ ಮತ್ತು ಪತ್ರಿಕೆಯಂತಹ ಸಂವಹನ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಬಗ್ಗೆಯೂ ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ: ಸಂವಹನ ,ಸಮೂಹ ಸಂವಹನ ಮಾಧ್ಯಮಗಳು ,ಸಂವಹನ ಮಾಧ್ಯಮಗಳ ಸಮಾಜೋ-ರಾಜಕೀಯ ಆಯಾಮಗಳು , ದೂರದರ್ಶನ ,ಆಕಾಶವಾಣಿ ,ಪತ್ರಿಕೆ ,ಸಂಹವನ ಮಾಧ್ಯಮಗಳ ಅನಿವಾರ್ಯತೆ ,ಕನ್ನಡ ಅಭಿವೃದ್ಧಿ ,ಸಂವಹನ ಮಾಧ್ಯಮಗಳು ಮತ್ತು ಕನ್ನಡ ಅಭಿವೃದ್ಧಿ
©2025 Book Brahma Private Limited.