ಪತ್ರಿಕೋದ್ಯಮ ಪ್ರವೇಶಿಸಲು ಬಯಸುವವರಿಗಾಗಿ ಲೇಖಕ ಶ್ರೀಧರ ನಾಯಕ್ ಅವರು ರಚಿಸಿದ ಕೃತಿ ‘ಪತ್ರಿಕೋದ್ಯಮ : ಒಂದು ನೇರ ನೋಟ’. ಸುದ್ದಿ ಸಂಗ್ರಹದ ವಿಧಾನ, ಸುದ್ದಿ ಸಂಗ್ರಹದ ಸಂದರ್ಭದಲ್ಲಿ ವಹಿಸಬೇಕಾಗಿರುವ ಎಚ್ಚರಿಕೆ, ಪ್ರಕಟಣೆಯ ಸಂದರ್ಭದಲ್ಲಿ ಎಡವಿದರೆ ಆಗುವ ಅನಾಹುತದ ಬಗ್ಗೆ ಲೇಖಕರು ಉದಾಹರಣೆಯ ಮೂಲಕ ಇಲ್ಲಿ ನೀಡಿದ್ದಾರೆ. ವ್ಯಂಗ್ಯಚಿತ್ರ, ಚಿತ್ರಮಾಲಿಕೆ, ಛಾಯಾಚಿತ್ರ ಈ ಮುಂತಾದ ಪತ್ರಿಕೋದ್ಯಮಕ್ಕೆ ಸಂಬಂಧಪಟ್ಟವುಗಳ ಬಗ್ಗೆ ವಿಸ್ತೃತ ಮಾಹಿತಿ ಹಾಗೂ ಸಾಹಿತಿಗಳು ಪತ್ರಕರ್ತರಾಗಿ ಬರೆದ ಕಥನ ಇಲ್ಲಿದೆ.
©2025 Book Brahma Private Limited.