ಪತ್ರಕರ್ತರ ಮುಂದಿರುವ ಸವಾಲುಗಳ ಕುರಿತು ಕನ್ನಡದ ಪ್ರಮುಖ ಲೇಖಕ ನಾಗೇಶ ಹೆಗಡೆ ಅವರು ಇಲ್ಲಿ ವಿವರಿಸಿದ್ದಾರೆ. ಜರ್ನಲಿಸ್ಟ್‌ಗಳ ಕೈಗೆ ಇಂದು ಲಾಪ್‌ಟಾಪ್, ಐಪ್ಯಾಡ್, ಮೈಕ್, ಕ್ಯಾಮೆರಾ, ವಿಡಿಯೊ ರೆಕಾರ್ಡ್‌ಗಳು ಬಂದಿದೆ. ಡಿಜಿಟಲ್ ಜಗತ್ತಿನಲ್ಲಿ ಧ್ವನಿ, ದೃಶ್ಯ, ಗ್ರಾಫಿಕ್ಸ್ ಮೂಲಕ ಅಭಿವ್ಯಕ್ಯಿಯನ್ನು ಹೊರಹೊಮ್ಮಿಸಬೇಕಾಗಿದೆ. ಮಾಧ್ಯಮ ಜಗತ್ತಿನಲ್ಲಿ ಇಂತಹ ಬದಲಾವಣೆಗಳು ಕಂಡುಬಂದರೂ ಸಹ ಪತ್ರಕರ್ತರ ಮೂಲ ಅಗತ್ಯಗಳು ಬದಲಾಗಿಲ್ಲ. ಸುದ್ದಿಯನು ಆಯ್ಕೆಮಾಡುವಲ್ಲಿ , ಅದನ್ನು ಅಭಿವ್ಯಕ್ತಪಡಿಸುವಲ್ಲಿ, ಮೇಲಿನವರೊಂದಿಗೆ ಏಗುವಲ್ಲಿ, ಹೊಸಬರನ್ನು ನಿಭಾಯಿಸುವಲ್ಲಿ ಇನ್ನು ಪತ್ರಕರ್ತರಲ್ಲಿ ಬದಲಾವಣೆ ಕಂಡು ಬಂದಿಲ್ಲ. ಇಂತಹ ಪ್ರಮುಖ ಸಂಗತಿಗಳ ಕುರಿತು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ. ಜರ್ನಲಿಸಂ ವಿದ್ಯಾರ್ಥಿಗಳಿಗೆ, ಪತ್ರಕರ್ತರ ಜಗತ್ತನ್ನು ತಿಳಿಯ ಬಯಸುವವರಿಗೆ ಇದೊಂದು ಉತ್ತಮ ಕೈಪಿಡಿಯಾಗಿದೆ.
©2024 Book Brahma Private Limited.