ಸ್ವಾತಂತ್ರ್ಯ ಪೂರ್ವದ ಪತ್ರಿಕಾಧರ್ಮದ ಪ್ರಧಾನ ಆಸಕ್ತಿಗಳಲ್ಲಿ ಮಹಿಳಾಪರ ಸುಧಾರಣೆಗಳೂ ಮುಖ್ಯವಾಗಿತ್ತು. ಈ ಆಸಕ್ತಿಯ ಫಲವಾಗಿ ಮಹಿಳೆಯರಿಗಾಗಿ ಅಂಕಣಗಳನ್ನು ನಿರ್ಮಿಸುವ ಮತ್ತು ಅಂಕಣಗಳನ್ನು ಸಾಧ್ಯವಾದಷ್ಟು ಅವರೇ ನಿರ್ವಹಿಸುವ ಇತ್ಯಾದಿ ನೆಲೆಯವರೆಗೆ ಪತ್ರಿಕೆ ಮತ್ತು ಮಹಿಳೆಯ ಸಂಬಂಧವು ವಿಸ್ತಾರಗೊಂಡಿತ್ತು. ಈ ವಿಸ್ತರಣೆಯ ಮುಂದುವರಿಕೆಯಾಗಿ ತಿರುಮಲಾಂಬ, ಕಲ್ಯಾಣಮ್ಮ, ಆರ್. ಶ್ಯಾಮಲಾದೇವಿ ಮುಂತದವರು ಸಂಪಾದಕಿಯರಾಗಿ ಪತ್ರಿಕೆಯನ್ನು ನಿರ್ವಹಿಸುವ ಅವಕಾಶವನ್ನು ಪಡೆದುಕೊಂಡರು. ಹೀಗೆ ಹಂತಹಂತವಾಗಿ ಬೆಳೆದುಬಂದ ಪತ್ರಿಕೆಯೊಂದಿಗಿನ ಮಹಿಳೆಯರ ಸಂಬಂಧವನ್ನು ಈ ಕೃತಿಯಲ್ಲಿ ಗುರುತಿಸಲಾಗಿದೆ.
©2024 Book Brahma Private Limited.