ಪತ್ರಕರ್ತ ವಿಶ್ವೇಶ್ವರ ಭಟ್ ಅವರ ಕೃತಿ-ಸಂಪಾದಕರನ್ನೇ ಕೇಳಿ?. ಸಾಮಾನ್ಯವಾಗಿ ತಮ್ಮ ಪ್ರದೇಶದ ಯಾವುದೇ ಸಮಸ್ಯೆಗಳನ್ನು ಕೇಳಲು ಇಲ್ಲವೇ ಕಳುಹಿಸಿದ ಲೇಖನ ಯಾವಾಗ ಪ್ರಕಟವಾಗುವುದೆಂದು ಇಲ್ಲವೇ ಸುದ್ದಿ ಪ್ರಕಟಣೆಯಲ್ಲಿ ತಾರತಮ್ಯ ಮಾಡಿರುವ ಬಗ್ಗೆ ಹೀಗೆ ಅಸಂಖ್ಯ ಪ್ರಶ್ನೆಗಳಿದ್ದು, ಅವುಗಳ ಕುರಿತು ಪತ್ರಿಕೆಯಲ್ಲಿ ಯಾರನ್ನು ಕೇಳಬೇಕು? ಎಂಬುದು ಪತ್ರಿಕಾ ಓದುಗರಿಗೆ ಸಮಸ್ಯೆಯಾಗಿರುತ್ತದೆ. ಸಂಪಾದಕರನ್ನೇ ಕೇಳಬೇಕೆಂದರೆ ಅವರು ಸದಾ ಮೀಟಿಂಗ್ ನಲ್ಲಿದ್ದಾರೆ. ಅವರೀಗ ಊರಲ್ಲಿ ಇಲ್ಲ. ಅಥವಾ ಬೇರೆ ಯಾರೋ ದೊಡ್ಡವರನ್ನು ಸಂದರ್ಶನ ಮಾಡಲು ಹೋಗಿದ್ದಾರೆ ಇಲ್ಲವೇ ಇಂತಹ ಸಂಗತಿಗಳನ್ನು ಸಂಪಾದಕರ ಮುಂದೆಯೇ ನೀವು ಹೇಳಬೇಕು. ಅದು ನಮ್ಮ ಹುದ್ದೆಗೆ ಮೀರಿದ್ದು ಎಂದೂ ಪ್ರತಿಕ್ರಿಯೆಗಳು ಸಾಮಾನ್ಯವಾಗಿರುತ್ತವೆ. ಹೀಗಾಗಿ, ಜನಸಾಮಾನ್ಯ ಓದುಗರಿಗೆ ಸಂಪಾದಕರು ಸಿಗುವುದೇ ಕಷ್ಟ ಎಂಬ ಭಾವನೆ ಬಲವಾಗಿ ಓದುಗರಲ್ಲಿ ಬೇರೂರಿರುತ್ತದೆ. ಇಂತಹ ಸಂಗತಿಗಳ ಕುರಿತು ಪ್ರಸ್ತಾಪಿಸುವ ಈ ಕೃತಿಯಲ್ಲಿ ಲೇಖಕರು ‘ನೇರವಾಗಿ ಸಂಪಾದಕರನ್ನೇ ಕೇಳಿ’ ಎಂದೂ ಸಲಹೆ ನೀಡುತ್ತಾರೆ. ಪತ್ರಿಕೆಯ ಸಿಬ್ಬಂದಿ ಹೊಣೆಗಾರಿಕೆ, ಯಾವ ಯಾವ ಸಮಸ್ಯೆಗಳಿಗೆ ಸಂಪಾದಕರು ಉತ್ತರಿಸುತ್ತಾರೆ ಇತ್ಯಾದಿ ವಿಷಯಗಳ ಬಗ್ಗೆ ಓದುಗರಿಗೆ ಮಾಹಿತಿ ನೀಡುವ ಕೃತಿ ಇದು. ಲೇಖಕರು ಪತ್ರಕರ್ತರಿದ್ದು, ವಿವಿಧ ಪತ್ರಿಕೆಯಲ್ಲಿ ಮಹತ್ವದ ಸ್ಥಾನ ನಿರ್ವಹಿಸಿದ್ದರಿಂದ ಪ್ರಸ್ತಾಪಿತ ಇಲ್ಲಿಯ ವಿಷಯಗಳು ಅಧ್ಯಯನ ದೃಷ್ಟಿಯಿಂದ ಯೋಗ್ಯವಾಗಿವೆ.
©2024 Book Brahma Private Limited.