ಡಾ. ಓಂಕಾರ ಕಾಕಡೆ ಅವರ ಕೃತಿ-‘ಮಹಿಳಾ ಸಬಲೀಕರಣ ಮತ್ತು ಕನ್ನಡ ದಿನಪತ್ರಿಕೆಗಳು. ಕರ್ನಾಟಕ ಮಾಧ್ಯಮ ಅಕಾಡೆಮಿಯ ಫೆಲೋಶಿಪ್ ಯೋಜನೆ (2007) ಅಡಿಯಲ್ಲಿ ನಡೆದ ಅಧ್ಯಯನ ವಿಷಯಗಳು ಕೃತಿಯಲ್ಲಿವೆ. ಮಹಿಳೆಯರ ಸ್ಥಿತಿ-ಗತಿ, ಮಹಿಳಾ ಸಬಲೀಕರಣ, ಮಾಧ್ಯಮಗಳು ಮತ್ತು ಮಹಿಳಾ ಸಬಲೀಕರಣ, ಮುದ್ರಣ ಮಾಧ್ಯಮ, ಕನ್ನಡ ಪತ್ರಿಕೋದ್ಯಮ, ಮಹಿಳಾ ಸಬಲೀಕರಣ-ಕನ್ನಡ ದಿನಪತ್ರಿಕೆಗಳು -ಇಲ್ಲಿಯ ಪ್ರಮುಖ ಅಧ್ಯಾಯಗಳಾಗಿ ಚರ್ಚೆಗೊಳಗಾಗಿವೆ.
ಮಹಿಳೆಯರ ಸಕಾರಾತ್ಮಕ ಸಾಧನೆಗಳಿದ್ದರೂ ನಕಾರಾತ್ಮಕ ಚಿತ್ರಣವಾಗಿ ಇಂದಿನ ಮುದ್ರಣ ಮಾಧ್ಯಮದಲ್ಲಿ ವಿಜೃಂಭಿಸುತ್ತಿವೆ ಎಂಬ ವಿಷಾದವೂ, ಪತ್ರಿಕೆಗಳು ವ್ಯಾಪಾರೀಕರಣವಾಗುತ್ತಿರುವ ನಡೆಯ ಧೋರಣೆ, ಮಹಿಳೆಯರ ಅಡುಗೆ ಮನೆಗೆ ಸೀಮಿತವಾಗಿಸುವ ಪುರುಷ ಪ್ರಧಾನ ಮನೋಭಾವ ಇಂದಿಗೂ ಮುಂದುವರಿಯುತ್ತಿರುವ ಬಗ್ಗೆ ವ್ಯಾಪಕ ಚರ್ಚೆಗೆ ಈ ಕೃತಿ ಅವಕಾಶ ನೀಡುತ್ತದೆ. ಪ್ರತಿ ಅಧ್ಯಾಯವು ಅಂಕಿ-ಸಂಖ್ಯೆಗಳ ದಾಖಲೆಸಹಿತ ವಿಷಯದ ಮಂಡನೆ ಇದ್ದು, ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ.
©2025 Book Brahma Private Limited.