ಲೇಖಕ-ಪತ್ರಕರ್ತ ಕೂಡ್ಲಿ ಗುರುರಾಜ ಅವರ ಕೃತಿ-ಪತ್ರಿಕಾ ಮಾಧ್ಯಮ: ವಾಣಿಜ್ಯದ ಆಯಾಮ. ಪತ್ರಿಕೋದ್ಯಮವು ವ್ಯಾಪಾರೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಅದರ ಸ್ವರೂಪವನ್ನು ತೋರುವ ಕೃತಿ ಇದು. ‘ಉದ್ಯಮವಾದ ಪತ್ರಿಕಾ ಮಾಧ್ಯಮ; ವ್ಯಾಪಾರೀಕರಣದ ಬಹಳ ಆಯಾಮದ ಒಂದು ಅಧ್ಯಯನ’ ವಿಷಯವಾಗಿ ಮಂಗಳೂರು ವಿ.ವಿ.ಗೆ ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧ. ಅದರ ಸಂಪೂರ್ಣ ಸಾರವೇ ಈ ಪುಸ್ತಕ. ಸಾಹಿತಿ ಕೆ. ಸತ್ಯನಾರಾಯಣ ಅವರು ಕೃತಿಗೆ ಮುನ್ನುಡಿ ಬರೆದು ‘ಮಾಧ್ಯಮದ ಮುಖ್ಯ ಆಸ್ತಿ ವಿಶ್ವಾಸಾರ್ಹತೆ. ಅದಕ್ಕೆ ಲೋಪ ಬಂದಾಗ ಪತ್ರಿಕೆಯ ಜೀವ ಹೋಗಬಹುದು. ಆದರೆ, ವರ್ಷಗಳ ದುಡಿಮೆಯಿಂದ ಗಳಿಸಿದ ವಿಶ್ವಾಸಾರ್ಹತೆಯನ್ನು ಪತ್ರಕರ್ತ ಎಂದೆಂದಿಗೂ ಕಳೆದುಕೊಳ್ಳಬಾರದು. ಈ ಸಂದೇಶವನ್ನು ಸ್ಪಷ್ಟವಾಗಿ ನೀಡಿರುವ ಡಾ. ಕೂಡ್ಲಿ ಗುರುರಾಜ ಅವರು ಅಭಿನಂದನಾರ್ಹರು’ ಎಂದು ಪ್ರಶಂಸಿಸಿದ್ದಾರೆ.
ಓದುಗರ ಏನಂತಾರೆ...?, ಮಾಧ್ಯಮ ವಾಣಿಜ್ಯೀಕರಣದ ಸುತ್ತ, ಕಾಸಿಗಾಗಿ ಸುದ್ದಿ, ಸಂದರ್ಶನಗಳು, ಕೆಲ ಮಾತು -ಹೀಗೆ ವಿವಿಧ ಅಧ್ಯಾಯಗಳಡಿ ವ್ಯಾಪಾರೀಕರಣ ಗೊಳ್ಳುತ್ತಿರುವ ಪತ್ರಿಕೋದ್ಯಮ ಕುರಿತು ಸಾಧಕ-ಬಾಧಕಗಳ ವಿವಿಧ ಆಯಾಮಗಳನ್ನು ಲೇಖಕರು ಇಲ್ಲಿ ಚರ್ಚಿಸಿದ್ದಾರೆ.
©2024 Book Brahma Private Limited.