ಜನಪರ ಪತ್ರಿಕೋದ್ಯಮದ ವಿವಿಧ ಮುಖಗಳನ್ನು ಅನಾವರಣ ಗೊಳಿಸುವ ಕೃತಿ ’ದೇವಕಾರು’. ಲೇಖಕರು-ಸತೀಶ್ ಚಪ್ಪರಿಕೆ. ಈಗಾಗಲೇ ಪ್ರಕಟಗೊಂಡಿರುವ ಈ ಎಲ್ಲ ಲೇಖನಗಳನ್ಳು ಕೃತಿಯ ಆಶಯಕ್ಕೆ ಅನುಗುಣವಾಗಿ ಪೂರಕವಾಗಿ ಹಿಗ್ಗಿಸಲಾಗಿದೆ. ಕೆಲ ಬದಲಾವಣೆಗಳೂ ಆಗಿವೆ ಎಂದು ಲೇಖಕರು ಹೇಳಿದ್ದಾರೆ.
ಭಾರತೀಯ ಮಾಧ್ಯಮ ವಲಯವು ಮಾನವೀಯ ಅಥವಾ ಜನಪರ ವರದಿಗಳಿಗೆ ಸೂಕ್ತ ಪ್ರಾಶಸ್ತ್ಯ ನೀಡುತ್ತಿಲ್ಲ ಎಂಬ ಕೊರಗು ಈ ಎಲ್ಲ ಲೇಖನಗಳ ಬರೆಹಕ್ಕೆ ಮೂಲ. ಪತ್ರಿಕೋದ್ಯಮ, ಪತ್ರಕರ್ತ ಯಾರಿಗಾಗಿ, ಅವರ ಸಾಮಾಜಿಕ ಹೊಣೆಗಾರಿಕೆಗಳೇನು ಎಂದು ಪ್ರಶ್ನಿಸುತ್ತಲೇ ಎಚ್ಚರಿಸುವ ಇಲ್ಲಿಯ ಬಹುತೇಕ ಲೇಖನಗಳು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ ಮಾಧ್ಯಮಕ್ಕೆ ಉತ್ತಮ ಮಾರ್ಗದರ್ಶಿಯಂತಿವೆ. ಪತ್ರಿಕೋದ್ಯಮ-ಪತ್ರಕರ್ತ ಯಾರಿಗಾಗಿ, ದೇವಕಾರು-ಒಂದು ಹಳ್ಳಿಯ ಕೊಲೆ, ವಿದರ್ಭಾ-ಕಲಾವತಿ ವಿಧವಾ ಪಡೆ, ಬಂಡ್ಲಪಲ್ಲಿ; ಅಲ್ಲೊಂದು ಲೋಕವುಂಟು, ಬಳ್ಳಾರಿ: ಧರೆ ಹೊತ್ತಿ ಉರಿದೊಡೆ, ವಾರಣಾಸಿ: ಗಂಗೆಯೊಡಲಿಗೆ ಬೆಂಕಿ, ದಾವಣಗೆರೆ: ತಾಹೀರ ಅಲಿ ಒಂದು ನೆನಪು, ಪುಲಕುಂಟ: ಪಾಪದ ಹೂಗಳ ಕೂಟ, ಉದಕಮಂಡಲ: ನೀಲಗಿರಿ ಸಾಮ್ರಾಟರ ಬದುಕು-ಬವಣೆ, ಚೋಂಡಿಮುಖೇಡ್: ರಾಜಕೀಯಕ್ಕೊಂದು ಸವಾಲು ಹೀಗೆ ಹತ್ತು ಲೇಖನಗಳು ತಮ್ಮಅಧ್ಯಯನಪೂರ್ಣ ಒಳ ನೋಟ ಹಾಗೂ ಸಾಮಾಜಿಕ ಕಳಕಳಿಯೊಂದಿಗೆ ಕೃತಿಯ ಮೌಲ್ಯವನ್ನು ಹೆಚ್ಚಿಸಿವೆ.
©2024 Book Brahma Private Limited.